ವಾಷಿಂಗ್ಟನ್: ಕಳೆದ ವರ್ಷದ ಜುಲೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಅದ್ದೂರಿಯಾಗಿ ನೆರವೇರಿತ್ತು. ದೇಶ ವಿದೇಶಗಳ ಗಣ್ಯರಿಗೆ ಮದುವೆಗೆ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ನೂರಾರು ಗಣ್ಯರು ಈ ವಿವಾಹಕ್ಕೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು.
ಇದೆ ರೀತಿ ಅಮೆರಿಕದ ಸೆಲೆಬ್ರಿಟಿ, ಮಾಡೆಲ್ ಮತ್ತು ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಷಿಯಾನ್ ಮತ್ತು ಅವರ ಸಹೋದರಿ ಗ್ಲೋ ಕರ್ದಷಿಯಾನ್ ಕೂಡ ಈ ವಿವಾಹದಲ್ಲಿ ಭಾಗಿಯಾಗಿದ್ದರು. ಆದ್ರೆ ಕಿಮ್ ಇತ್ತೀಚಿನ ಹೇಳಿಕೆ ಆಶ್ಚರ್ಯ ಹುಟ್ಟಿಸಿದ್ದು ತಮಗೆ ಅಂಬಾನಿ ಯಾರು ಎಂದೇ ಗೊತ್ತಿರಲಿಲ್ಲ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಅಂಬಾನಿ ಕುಟುಂಬದ ಸ್ನೇಹಿತೆ ಆಭರಣ ವಿನ್ಯಾಸಗಾರ್ತಿ ಲೋರೆನ್ ಕ್ವಾರ್ಟ್ಸ್ ನಮಗೂ ಉತ್ತಮ ಸ್ನೇಹಿತೆ. ಹೀಗಾಗಿ ಲೋರೇನ್ ಅಂಬಾನಿ ಕುಟುಂಬ ನಮ್ಮನ್ನೂ ವಿವಾಹಕ್ಕೆ ಆಹ್ವಾನಿಸಲು ಬಯಸುತ್ತಿರುವ ವಿಚಾರ ಹೇಳಿದರು. ಹೀಗಾಗಿ ನಾವೂ ಅವರೊಂದಿಗೆ ತೆರಳಿದೆವು ಎಂದು ಹೇಳಿದ್ದಾರೆ.
ಇನು ಅನಂತ್ ಅಂಬಾನಿಯ ಮದುವೆ ಆಮಂತ್ರಣ ಪತ್ರಿಕೆಯ ಬಗ್ಗೆ ಮಾತನಾಡಿದ ಆಕೆ, ಆಮಂತ್ರಣ ಪತ್ರಿಕೆ ಸುಮಾರು 18-20 ಕೆ.ಜಿ ತೂಕವಿತ್ತು. ಅದನ್ನು ತೆರೆದಾಗ ಸಂಗೀತ ಬರುತ್ತಿತ್ತು.ಹೀಗಾಗಿ ನಾವು ಇಂಪ್ರೆಸ್ ಆದ್ವಿ. ಈ ರೀತಿಯ ಗ್ರಾಂಡ್ ಆಮಂತ್ರಣಕ್ಕೆ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.