Wednesday, November 13, 2024
Homeಟಾಪ್ ನ್ಯೂಸ್High Court : ಪತ್ನಿ ಸಂಪಾದಿಸಿದರೂ ಮಕ್ಕಳ ಪಾಲನೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ- ಕೋರ್ಟ್

High Court : ಪತ್ನಿ ಸಂಪಾದಿಸಿದರೂ ಮಕ್ಕಳ ಪಾಲನೆಯಿಂದ ಪತಿ ತಪ್ಪಿಸಿಕೊಳ್ಳುವಂತಿಲ್ಲ- ಕೋರ್ಟ್

ನವದೆಹಲಿ : ತನ್ನ ಪತ್ನಿ ಸಂಪಾದಿಸಿದರೂ ಮಗುವನ್ನು ಪಾಲನೆ ಮಾಡುವ ಹೊಣೆಯಿಂದ ಪತಿಯು ತಪ್ಪಿಸಿಕೊಳ್ಳುವಂತಿಲ್ಲ ಎಂದು ಪಂಜಾಬ್​ & ಹರ್ಯಾಣ ನ್ಯಾಯಾಲಯ ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.

ತನ್ನ ಅಪ್ರಾಪ್ತ ಪುತ್ರಿಯನ್ನು ಸಲಹುವುದಕ್ಕೆ ಪ್ರತಿ ತಿಂಗಳು 7 ಸಾವಿರ ರೂಪಾಯಿ ಜೀವನಾಂಶ ರೂಪದಲ್ಲಿ ನೀಡಬೇಕು ಎಂದು ಪತ್ನಿಯೋರ್ವಳು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಅರ್ಜಿ ಪುರಸ್ಕರಿಸಿ ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಹೈಕೋರ್ಟ್​ ಮೊರೆಹೋಗಿದ್ದ ಪತಿಯ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಪತ್ನಿ ಎಷ್ಟೇ  ಸಂಪಾದನೆ ಮಾಡುತ್ತಿದ್ದರೂ, ಹಾಗೆಂದ ಮಾತ್ರಕ್ಕೆ ಮಗುವನ್ನು ಸಾಕುವ ಹೊಣೆಯಿಂದ ಪತಿ ಸ್ವಯಂ ಮುಕ್ತನೆಂದು ಭಾವಿಸುವಂತಿಲ್ಲ ಎಂದು ಅಭಿಪ್ರಾಯಪಡುವ ಮೂಲಕ ಕೋರ್ಟ್​ ಪತಿಗೆ ತರಾಟೆಗೆ ತೆಗೆದುಕೊಂಡಿದೆ.

CrPC ಸೆ. 125 ಎಂಬುವುದು ಮಹಿಳೆಯರು & ಮಕ್ಕಳನ್ನು ಸಂಭಾವ್ಯ ಆಶ್ರಯರಾಹಿತ್ಯತೆ & ನಿರ್ಗತಿಕ ಬದುಕಿನಿಂದ ರಕ್ಷಿಸುವ ಸಾಮಾಜಿಕ ಪ್ರಮುಖ ಸಾಧನ. ಹೀಗಾಗಿ ತಂದೆಯಾದವನಿಗೆ ಸಾಕಷ್ಟು ಜೀವನೋಪಾಯದ ಮಾರ್ಗಗಳಿದ್ದಾಗ ಅವನು ತನ್ನ ಪತ್ನಿ & ಮಕ್ಕಳನ್ನು ರಕ್ಷಿಸಿಕೊಳ್ಳಲು ಬದ್ಧನಾಗಿರುತ್ತಾನೆ ಎಂದು ನ್ಯಾ.ಸುಮೀತ್ ಗೋಯೆಲ್ ಅವರ ಏಕಸದಸ್ಯ ಪೀಠ ಒತ್ತಿ ಹೇಳಿದೆ.

ಮಗುವಿನ ಪಾಲನೆಗೆ ತಾಯಿಗೆ ಸಾಕಷ್ಟು ಅವಕಾಶಗಳಿವೆ. ಹೀಗಿರುವಾಗ ತಾನೇಕೆ ಆ ಮಗುವನ್ನು ನೋಡಿಕೊಳ್ಳಲಿ ಎಂಬ ತಂದೆಯ ವಾದದ ಅರ್ಜಿಯನ್ನು ಪೀಠವು ವಜಾಗೊಳಿಸಿ ಈ ಮಹತ್ವದ ಆದೇಶವಿತ್ತಿದೆ.

ಹೆಚ್ಚಿನ ಸುದ್ದಿ

error: Content is protected !!