Saturday, March 15, 2025
Homeಟಾಪ್ ನ್ಯೂಸ್VIRAL NEWS : AC ರಿಪೇರಿ ವೇಳೆ ಭಾರೀ ದುರಂತ - ಕಂಪ್ರೆಸರ್ ಸ್ಫೋಟದಿಂದ ವ್ಯಕ್ತಿ...

VIRAL NEWS : AC ರಿಪೇರಿ ವೇಳೆ ಭಾರೀ ದುರಂತ – ಕಂಪ್ರೆಸರ್ ಸ್ಫೋಟದಿಂದ ವ್ಯಕ್ತಿ ಸಾವು : VIDEO

ದೆಹಲಿ : ರಿಪೇರಿಗೆ ಬಂದಿದ್ದು ಎಸಿ ಯನ್ನು ರಸ್ತೆ ಬದಿಯಲ್ಲಿಟ್ಟು ಸರಿಪಡಿಸುವ ವೇಳೆ, ಇದ್ದಕ್ಕಿದ್ದಂತೆ AÇ ಕಂಪ್ರೆಸರ್ ಸ್ಫೋಟಗೊಂಡಿದ್ದು, Ac ರಿಪೇರಿ ಮಾಡುತ್ತಿದ್ದ ನೌಕರ ತೀವ್ರವಾಗಿ ಗಾಯಗೊಂಡ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೆಹಲಿಯ ಕೃಷ್ಣಾ ನಗರದ ಎಸಿ ರಿಪೇರಿ ಅಂಗಡಿಯಲ್ಲಿ ದುರಂತ ನಡೆದಿದ್ದು ಈ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಈ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮೋಹನ್ ಲಾಲ್ ಎಂದು ಗುರುತಿಸಲಾಗಿದೆ.ಸದ್ಯ ಪೊಲೀಸರು ಈ ತನಿಖೆ ಆರಂಭಿಸಿದ್ದಾರೆ.

ಈ ಸ್ಫೋಟ ಸಂಭವಿಸಿದಾಗ ಮತ್ತೊಬ್ಬ ಬೈಕ್ ಬೈಕ್‌ ಸವಾರ ಕೂಡ ಸ್ಥಳದಲ್ಲಿದ್ದ. ಆದ್ರೆ ಸ್ಫೋಟದಿಂದ ಬೆಚ್ಚಿಬಿದ್ದ ಆತ ಕೂಡಲೇ ಸಹಾಯಕ್ಕೆ ಬಾರದೆ ಹೆದರಿ ದೂರಕ್ಕೆ ಓಡಿದ್ದಾನೆ. ಪರಿಣಾಮವಾಗಿ ಸ್ಫೋಟದ ತೀವ್ರತೆಗೆ ಮೋಹನ್ ಲಾಲ್ ನೆಲಕ್ಕೆ ಬಿದ್ದಿದ್ದು, ತೀವ್ರ ಗಾಯಗಳಾಗಿ ಸಾವನ್ನಪ್ಪಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!