ಹುಬ್ಬಳ್ಳಿಯಲ್ಲಿ (Hubli) ಬಿಜೆಪಿ ಕಾರ್ಯಕರ್ತೆ (Bjp Worker) ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುತ್ತಿದೆ. ಇದೀಗ ಸುಜಾತ ಹಂಡಿಯ ಕರಾಳ ಮೂಲಕ ವೈರಲ್ (Video Viral) ಆಗಿದ್ದು, ವ್ಯಕ್ತಿಯೊಬ್ಬರಿಗೆ ಬೆಲ್ಟ್ ನಿಂದ ಮಾರಣಾಂತಿಕ ಹಲ್ಲೆ (Assault) ನಡೆಸುತ್ತಿರುವ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋ ಕಳೆದ ಮೂರು ವರ್ಷದ ಹಳೆಯದ್ದು ಎನ್ನಲಾಗಿದ್ದು, ಇದರಲ್ಲಿ ಸುಜಾತಾ ಹಂಡಿ ವ್ಯಕ್ತಿಯೋರ್ವನ ಮೇಲೆ ಮೃಗದ ರೀತಿ ಎರಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ತಪ್ಪಾಯ್ತು ಎಂದು ಕಾಲಿಗೆ ಬಿದ್ದರೂ ಕೂಡ ಬಿಡದೇ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾಳೆ.
ಧಾರವಾಡ ತಾಲ್ಲೂಕಿನ ತುಕಾರಾಮ್ ಎಂಬ ವ್ಯಕ್ತಿಯನ್ನು ಸುಜಾತಾ ಹಂಡಿ ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿದ್ದಾಳೆ. ಬಳಿಕ ಅವನನ್ನು ಬಿಡದೆ ನೈಲಾನ್ ಹಗ್ಗದಿಂದ, ಹಲ್ಲೆ ನಡೆಸಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಸೊಂಟದಲ್ಲಿದ್ದ ಬೆಲ್ಟ್ ನಿಂದ ಕೂಡ ಮನಸ್ಸೋಇಚ್ಛೆ ಹಲ್ಲೆ ಮಾಡಿದ್ದಾಳೆ.
ಈ ವೇಳೆ ತುಕಾರಾಮ್, ಅಮ್ಮಾ, ತಾಯಿ, ಅಕ್ಕಾ ಬಿಡು ಎಂದು ಕಾಲಿಗೆ ಬಿದ್ದು ಕೇಳಿಕೊಂಡರು ಕೂಡ ಕ್ಯಾರೇ ಎನ್ನದೆ ತನ್ನ ಇಚ್ಛೆಯಂತೆ ಹಲ್ಲೆ ಮಾಡಿದ್ದಾಳೆ. ಜೊತೆಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾಳೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ವಿಡಿಯೋ ನೋಡಿದ್ರೆ ಈಕೆ ಹೆಣ್ಣಾ ಹೆಮ್ಮಾರಿನಾ ಅನ್ನೋ ಪ್ರಶ್ನೆ ಮೂಡುತ್ತದೆ.
ಸುಜಾತಾ ಹಂಡಿ, ಕೆಲ ಸಹಚರರೊಂದಿಗೆ ಸೇರಿ, ಹನಿಟ್ರ್ಯಾಪ್ ಮೂಲಕ ಕರೆದುಕೊಂಡು ಬಂದ ವ್ಯಕ್ತಿಯನ್ನು ನಾಲ್ಕು ದಿನಗಳ ಕಾಲ ಹಿಂಸೆ ಮಾಡಿದರೂ, 1.84 ಲಕ್ಷ ರೂ. ಹಣವನ್ನು ವಸೂಲು ಮಾಡಿದ್ದಾಳೆ. ಈ ಘಟನೆಗೆ ಸಂಬಂಧಪಟ್ಟ ವ್ಯಕ್ತಿ, ಸುಜಾತಾ ಹಂಡಿ ಮತ್ತು ಅವಳ ಸಹಚರರ ವಿರುದ್ಧ, 2023ರ ನವೆಂಬರ್ 12ರಂದು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಮೇರೆಗೆ ಸುಜಾತಾ ಹಂಡಿಯನ್ನು ಹಾಗೂ ಆಕೆಯ ಸಹಚರರನ್ನು ದಾರವಾಡ ಪೊಲೀಸರು ಬಂಧಿಸಿದ್ದರು, ಬಳಿಕ ಸುಜಾತಾ ಹಂಡಿ ಜಾಮೀನಿನ ಮೇಲೆ ಹೊರ ಬಂದಿದ್ದಳು. ಜೈಲಿನಿಂದ ಹೊರ ಬಂದ ಮೇಲೆ ಕೂಡ ತನ್ನ ಬುದ್ದಿ ಬಿಡದ ಸುಜಾತಾ ಮತ್ತೆ ಕೆಟ್ಟ ಕೆಲಸ ಮಾಡಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಬೆಲ್ಟ್ ಹಿಡಿದು ರಾಕ್ಷಸಿಯಂತೆ ವರ್ತನೆ – ಹುಬ್ಬಳ್ಳಿ ಸಂತ್ರಸ್ತೆಯ ಹಳೆಯ ವಿಡಿಯೋ ವೈರಲ್!#Oldvideo #viralvideo #Hubli #Hubballi #KannadaNews #navasamajanews pic.twitter.com/U7dW7NCpL3
— navasamaja (@navasamajanews) January 9, 2026
ಇನ್ನು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಈ ಪ್ರಕರಣದ ಬಗ್ಗೆ ಮಾತನಾಡಿದ್ದು, ಮಹೇಶ್ ಟೆಂಗಿನಕಾಯಿ ಪಕ್ಷಕ್ಕೆ ರಾಕ್ಷಸ ಪ್ರವೃತ್ತಿಯವರನ್ನು ಸೇರಿಸಿದ್ದಾರೆ. ಶಾಸಕರ ಕುಮ್ಮಕ್ಕಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಇದು ಮಹೇಶ್ ಟೆಂಗಿನಕಾಯಿ ಅವರ ‘ಟೂಲ್ ಕಿಟ್’ ಭಾಗವಾಗಿದೆ ಎಂದು ಅಕ್ರೋಶ ಹೊರಹಾಕಿದರು.
ಸುಜಾತಾ ಹಂಡಿಯನ್ನು ಪೊಲೀಸರು ಕರೆದುಕೊಂಡು ಹೋಗುವಾಗ ವಿಡಿಯೋ ಮಾಡಲಾಗಿದೆ. ನಂತರ ಅವರ ಬಟ್ಟೆ ಬಿಚ್ಚಿರುವ ದೃಶ್ಯವನ್ನು ತಿರುಚಿ ವೈರಲ್ ಮಾಡಲಾಗಿದೆ. ಈ ವಿಡಿಯೋವನ್ನು ಸುಜಾತಾ ಹಂಡಿಯ ತಮ್ಮ ಮರಿಯಾದಾಸ್ ಬಿಡುಗಡೆ ಮಾಡಿದ್ದು, ಪೊಲೀಸರ ವಿರುದ್ಧ ಬ್ಲಾಕ್ ಮೇಲ್ ಮಾಡಲು ಹಂಚಲಾಗಿದೆ ಎಂದು ರಜತ್ ಆರೋಪಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಕೆಲವು ವೀಡಿಯೊಗಳನ್ನು ವೈರಲ್ ಮಾಡಲಾಗಿದೆ, ಅವುಗಳಿಗೆ ತಕ್ಕಂತೆ ಪೊಲೀಸ್ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಈ ವೀಡಿಯೊಗಳು ಮೊದಲಿಗೆ 8 ಸೆಕೆಂಡ್ ಮತ್ತು 9 ಸೆಕೆಂಡ್ ಮಾತ್ರ ಹರಿಬಿಟ್ಟಿದ್ದರೂ, ನಂತರ ಸತ್ಯ ಹೊರಬಂದ ಮೇಲೆ ಅದಕ್ಕೆ ಬೇರೆಯ ವರಸೆ ಸೇರಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಉದ್ದೇಶದಿಂದ ಈ ಚಟುವಟಿಕೆ ನಡೆದಿವೆ. ಈ ಕುರಿತು ಪೊಲೀಸ್ ಇಲಾಖೆ ತಕ್ಷಣ ಸಮಗ್ರ ತನಿಖೆ ನಡೆಸಬೇಕು ಎಂದು ರಜತ್ ಉಳ್ಳಾಗಡ್ಡಿಮಠ ಆಗ್ರಹಿಸಿದ್ದಾರೆ.