ಅಮೆರಿಕ (America) ಮತ್ತು ಇಸ್ರೇಲ್ ನಡುವಿನ ಯುದ್ಧದ ಮಧ್ಯೆ, ಇರಾನ್ (Iran) ಮಾರಕ ಹೆಜ್ಜೆ ಇಟ್ಟಿದೆ. ಇಡೀ ಜಗತ್ತು ಭಯಪಡುವಂತೆ ಇರಾನ್ ಮಾಡಿದೆ. ಹೌದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದೆ. ಅಲ್ಲದೇ ಮಧ್ಯಪ್ರಾಚ್ಯದ ಸುನ್ನಿ ದೇಶಗಳ ಮೇಲೆ ಭೀಕರ ದಾಳಿ ಮಾಡುತ್ತಿದೆ.
ಆಪರೇಷನ್ ಎಪಿಕ್ ಫ್ಯೂರಿ ಹೆಸರಲ್ಲಿ ಅಖಾಡಕ್ಕಿಳಿದ ಡೊನಾಲ್ಡ್ ಟ್ರಂಪ್ ಸೇನೆ, ನೀರು ಕುಡಿದಷ್ಟು ಸುಲಭವಾಗಿ ಖಮೇನಿಯನ್ನು ಬೇಟೆಯಾಡಿದೆ. ಆದರೂ, ಸಿಕ್ಕಿದ್ದೇ ಚಾನ್ಸ್ ಅಂತ ಅಮೆರಿಕ, ಇಸ್ರೇಲ್ ಸೇರಿ, ಇರಾನ್ ಮೇಲೆ ಬಾಂಬಿನ ಮಳೆ ಸುರಿಯುತ್ತಿವೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸಾರಿರುವ ಯುದ್ಧ ಇನ್ನಷ್ಟು ಉದ್ವಿಗ್ನವಾಗುವತ್ತ ಸಾಗುತ್ತಿದೆ. ಇನ್ನೂ ಕೆಲ ವಾರಗಳ ಕಾಲ ಇದು ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.
ಫೆಬ್ರವರಿ 28ರಂದು ಡೊನಾಲ್ಡ್ ಟ್ರಂಪ್ ಅವರು 8 ನಿಮಿಷಗಳ ವಿಡಿಯೊ ಪೋಸ್ಟ್ ಅನ್ನು ಟ್ರುಥ್ ಸೋಷಿಯಲ್‌ನಲ್ಲಿ ಹಂಚಿಕೊಂಡಿದ್ದರು. ಇರಾನ್ ಒಳಗೆ ಪ್ರಬಲ ಶಸ್ತ್ರಸಜ್ಜಿತ ಯುದ್ಧ ನಡೆಸುವುದಾಗಿಯೂ ಹೇಳಿದ್ದರು. ಈ ಯುದ್ಧಕ್ಕೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಅವರು ಹೆಸರಿಸಿದ್ದರು.
ಎಲ್ಲೆಲ್ಲಿ ಅಮೆರಿಕದ ದಾಳಿ?
ಅಮೆರಿಕ ಸೇನೆಯು ಇರಾನ್‌ನ 1,250 ಸ್ಥಳಗಳನ್ನು ಗುರಿಯಾಗಿಸಿ ಶನಿವಾರ ದಾಳಿ ನಡೆಸಿತ್ತು. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್, ಇರಾನ್‌ನ 11 ನೌಕೆಗಳನ್ನು ನಾಶಪಡಿಸಿದ್ಯಂತೆ. ದಾಳಿ ಆರಂಭವಾದಾಗಿನಿಂದ ಈ ದಿನದವರೆಗೂ ಇರಾನಿನ 131 ನಗರಗಳಲ್ಲಿ 555 ಜನ ಮೃತಪಟ್ಟಿದ್ದಾರಂತೆ.
2023ರಿಂದ ಅಮೆರಿಕ ಮಾಡಿದ ಖರ್ಚೆಷ್ಟು?
ಅಮೆರಿಕವು 2023ರ ಅಕ್ಟೋಬರ್ 7ರಿಂದ ಸುಮಾರು 21.7 ಶತಕೋಟಿ ಡಾಲರ್ ಅಂದರೆ ₹2 ಲಕ್ಷ ಕೋಟಿ ಹಣವನ್ನು ಸೇನಾ ನೆರವಿಗಾಗಿ ವ್ಯಯಿಸಿದೆ. ಇದರೊಂದಿಗೆ ಯೆಮನ್, ಇರಾನ್ ಮತ್ತು ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಪಡೆಯ ನೆರವಿಗಾಗಿ ಅಮೆರಿಕವು 9.65 ಶತಕೋಟಿಯಿಂದ 12.07 ಶತಕೋಟಿ ಡಾಲರ್‌ವರೆಗೂ ಖರ್ಚು ಮಾಡಿದೆ ಎಂದು ಹೇಳಲಾಗಿದೆ.
ಇರಾನ್ ಯುದ್ಧದಲ್ಲಿ ಬಳಕೆಯಾದ ಅಸ್ತ್ರಗಳ್ಯಾವು?
ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 20 ಬಗೆಯ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಅಮೆರಿಕದ ಬಿ1 ಬಾಂಬರ್‌ಗಳು, ಪ್ರಮುಖ ಪರಮಾಣು ಹಾಗೂ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಬಿ2 ಸ್ಟೆಲ್ತ್ ಬಾಂಬರ್‌ಗಳ ಬಳಕೆಯಾಗಿದೆ. ಎಫ್35 ಲೈಟ್ನಿಂಗ್ ದ್ವಿತೀಯ ಹಾಗೂ ಎಫ್ 22 ರ‍್ಯಾಪ್ಟರ್‌ಗಳನ್ನು ಈ ದಾಳಿಯಲ್ಲಿ ಬಳಸಲಾಗಿದೆ.
ಎಫ್–15 ಫೈಟರ್ ಜೆಟ್‌ಗಳನ್ನೂ ಅಮೆರಿಕ ಬಳಕೆ ಮಾಡಿತು. ಆದರೆ ಮಾರ್ಚ್ 1ರಂದು ಮೂರು ಯುದ್ಧ ವಿಮಾನಗಳು ಪತನಗೊಂಡಿವೆ. F16 ಫೈಟಿಂಗ್ ಫಾಲ್ಕನ್, ಎಫ್/ಎ–18 ಸೂಪರ್ ಹಾರ್ನೆಟ್ ಮತ್ತು ಎ10 ಅಟ್ಯಾಕರ್ ಜೆಟ್‌ಗಳನ್ನು ಅಮೆರಿಕ ಬಳಕೆ ಮಾಡಿದೆ. ಈ ದಾಳಿಯಲ್ಲಿ ಮಾನವ ರಹಿತ ವ್ಯವಸ್ಥೆಯನ್ನೂ ಅಮೆರಿಕ ವ್ಯಾಪಕವಾಗಿ ಬಳಸಿದೆ. ‘ಲುಕಾಸ್’ ಡ್ರೋಣ್‌ಗಳನ್ನು ಬಳಸಿದೆ. ಎಂಕ್ಯೂ 9 ರೀಪರ್ ಡ್ರೋಣ್‌ಗಳು, ಎಂ142 ಎಂಬ ರಾಕೇಟ್ ಲಾಂಚರ್, ನೌಕಾದಳದಲ್ಲಿ ಟೊಮಾಹಾಕ್ ಕ್ಷಿಪಣಿ ಬಳಸಿದೆ.