ಚೆನ್ನೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ಪಳಯಸೀವರಮ್ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿದ್ದ ಮಹಿಳೆಯರು ಅಡುಗೆ ಅನಿಲ ಬೆಲೆ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ.
2024ರ ಚುನಾವಣೆಗೆ ಸಂಬಂಧಿಸಿ ಈಗಾಗಲೆ ಬಿಜೆಪಿ ಪ್ರಚಾರ ಆರಂಭಿಸಿದ್ದು, ಇದರ ಅಂಗವಾಗಿ ನಿರ್ಮಲಾ ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭ ಮಹಿಳೆಯರ ಕೋರಿಕೆಗೆ ಪ್ರತಿಕ್ರಿಯಿಸಿದ ಅವರು, ಭಾರತದಲ್ಲಿ ಅಡುಗೆ ಅನಿಲ ಉತ್ಪಾದನೆ ಮಾಡುವುದಿಲ್ಲ. ನಾವು ಆಮದು ಮಾಡಿಕೊಳ್ಳುತ್ತೇವೆ. ಅಲ್ಲಿ ಬೆಲೆ ಹೆಚ್ಚಾದರೆ ಇಲ್ಲೂ ಹೆಚ್ಚುತ್ತದೆ. ಆದರೆ 2 ವರ್ಷಗಳಲ್ಲಿ ಅದು ಕಡಿಮೆಯಾಗಿಲ್ಲ ಎಂದರು.