ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಸಿನಿಮಾ ದೇಶ ವಿದೇಶಗಳಲ್ಲೂ ಖ್ಯಾತಿ ಗಳಿಸಿದೆ. ಈ ನಡುವೆ ಬ್ರಿಟಿಷ್ ನಟ ಜೇಮಿ ಹ್ಯಾರಿಸ್ ಅವರು ಆರ್‌ಆರ್‌ಆರ್ ಸಿನಿಮಾವನ್ನು ಶ್ಲಾಘಿಸಿದ್ದಾರೆ.
ಇಂಡಿಯಾ ಟುಡೇ ಟಿವಿ ವಾಹಿನಿ ನಡೆಸಿದ ಸಂದರ್ಶನವೊAದರಲ್ಲಿ ಮಾತನಾಡಿರುವ ಅವರು, ‘ಆರ್‌ಆರ್‌ಆರ್ ರೀತಿಯ ಸಿನಿಮಾಗಳು ಹಾಲಿವುಡ್‌ನಲ್ಲಿಯೂ ಬರಬೇಕು’ ಈ ಸಿನಿಮಾ ‘ಚಿತ್ತಾಕರ್ಷಕವಾಗಿದೆ’ ಎಂದು ಬಣ್ಣಿಸಿದ್ದಾರೆ.
ಆರ್‌ಆರ್‌ಆರ್ ಒಂದು ಪ್ರಕಾರದಿಂದ (ಜೀನರ್) ಮತ್ತೊಂದು ಪ್ರಕಾರಕ್ಕೆ ಕರೆದೊಯ್ಯುತ್ತದೆ. ನಾಟು ನಾಟು ಹಾಡು ಹಾಗೂ ನೃತ್ಯ ಸಂಯೋಜನೆಯAತೂ ಅದ್ಭುತ ಎಂದು ಹೊಗಳಿದ್ದಾರೆ.
ಪ್ರೈಂನಲ್ಲಿ ಬಿತ್ತರವಾಗುವ ‘ಕಾರ್ನಿವಲ್ ರೊ’ ವೆಬ್ ಸಿರೀಸ್‌ನಲ್ಲಿ ಖಳನಟನಾಗಿ ಜೇಮಿ ಹ್ಯಾರಿಸ್ ಮಿಂಚಿದ್ದಾರೆ. ಅವರು ಅನೇಕ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದ ನಂತರ ಹಾಲಿವುಡ್ ಮಂದಿ ಈ ಸಿನಿಮಾವನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ.