ಬೆಂಗಳೂರು : ದೇಶಾದ್ಯಂತ ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ರಂಗು ರಂಗಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿದೆ.
ಇಂದು ವಿಧಾನಸೌಧದ ಆವರಣದಲ್ಲಿ ಬಿಜೆಪಿ ನಾಯಕರು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬವನ್ನು ಆಚರಿಸಿ ಶುಭಕೋರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಬೀದರ್ ಜಿಲ್ಲೆಯಿಂದ ಶರಣು ಸಲಗಾರ, ಶೈಲೇಂದ್ರ ಬೆಲ್ದಾಳೆ ಇನ್ನಿತರ ಮುಖಂಡರು ಬಣ್ಣವನ್ನು ಪರಸ್ಪರ ಹಚ್ಚಿಕೊಂಡು ಸಂಭ್ರಮಪಟ್ಟರು.