ಗದಗ ಜಿಲ್ಲೆಯ ಸುವರ್ಣ ಗಿರಿ ತಾಂಡಾದಲ್ಲಿ ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಉಸಿರಾಟದ ತೊಂದರೆಯಿಂದ ಅಸ್ವಸ್ಥವಾಗಿರುವ ಘಟನೆ ನಡೆದಿದೆ.
ಎಂದಿನಂತೆ ಬಸ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಬಣ್ಣ ಹಾಕಲು ಬಂದಿದ್ದಾರೆ. ಈ ವೇಳೆ ಯುವಕರಿಗೆ ನಮಗೆ ಪರೀಕ್ಷೆಯಿದೆ, ಬಣ್ಣ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿನಿಯರ ಮಾತಿಗೆ ಕಿವಿ ಗೋಡದೆ ಯುವಕರು ಅವರ ಮೇಲೆ ಬಣ್ಣ ಎರಚಿದ್ದಾರೆ.
ಸಗಣಿ, ಮಣ್ಣು ಮೊಟ್ಟೆ, ಗೊಬ್ಬರ, ಇನ್ನು ಹಲವು ರಾಸಾಯನಿಕ ಬಣ್ಣ ಮಿಶ್ರಣ ಮಾಡಿ ವಿದ್ಯಾರ್ಥಿನಿಯರ ಮೇಲೆ ಎರಚಿದ ಪರಿಣಾಮ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥರಾಗಿದ್ದಾರೆ. ಬಳಿಕ ವಿದ್ಯಾರ್ಥಿನಿಯರು ಶಾಲೆ ಹತ್ತಿರ ಬಸ್ ನಿಂದ ಇಳಿಯುತ್ತಲೇ ವಾಂತಿ ಮಾಡಲು ಆರಂಭಿಸಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಗೌರಿ ಪೂಜಾರ, ದಿವ್ಯಾ ಲಮಾಣಿ, ಅಂಕಿತಾ ತನುಷಾ ಎಂಬ ಬಾಲಕಿಯರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಗೌರಿ ಪೂಜಾರ ಹಾಗೂ ದಿವ್ಯಾರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಗೆ ರವಾನೀಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಣ್ಣ ಎರಚಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.