ನವದೆಹಲಿ : ಭಾರತ (India )ಮತ್ತು ಪಾಕಿಸ್ತಾನದ (pakistan) ನಡುವೆ ಉದ್ವಿಗ್ನತೆಗಳು ಮುಗಿದಿಲ್ಲ. ಈ ಮಧ್ಯೆ ಪಾಕಿಸ್ತಾನದ ಜೂನಿಯರ್ ಹಾಕಿ (Hockey) ತಂಡವು ಭಾರತದಲ್ಲಿ ನಡೆಯಲಿರುವ FIH ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ.
ಭಾರತದಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವುದನ್ನು ದೃಢಪಡಿಸಿದೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಘೋಷಿಸಿದ್ದಾರೆ.
ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಹಾಕಿ ಜಗತ್ತಿನಲ್ಲಿ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರಪಂಚದಾದ್ಯಂತದ 21 ವರ್ಷದೊಳಗಿನ ತಂಡಗಳು ಭಾಗವಹಿಸುತ್ತವೆ.
ಜೂನಿಯರ್ ಹಾಕಿ ವಿಶ್ವಕಪ್ ಈ ವರ್ಷ ನವೆಂಬರ್ 28 ರಿಂದ ಡಿಸೆಂಬರ್ 10 ರವರೆಗೆ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿದ್ದು, ಇದರಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ. ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಚಿಲಿ ಮತ್ತು ಸ್ವಿಟ್ಜರ್ಲೆಂಡ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಆಪರೇಷನ್ ಸಿಂದೂರ್ ಬಳಿಕ ಭಾರತ ಸರ್ಕಾರ ಕೂಡ ಪಾಕಿಸ್ತಾನ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು ಪಾಕಿಸ್ತಾನದ ಜೊತೆಗೆ ಯಾವುದೇ ದ್ವಿಪಕ್ಷಿಯ ಪಂದ್ಯಗಳನ್ನಾಗಲಿ ಅಥವಾ ಕ್ರೀಡೆಗಳನ್ನಾಗಲಿ ಆಡುವುದಿಲ್ಲ ಎಂದಿತ್ತು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಂದ್ಯಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ಆಡುವುದನ್ನು ಮುಂದುವರೆಸುವುದಾಗಿ ತಿಳಿಸಿತ್ತು
ಇನ್ನು, ಚಿಲಿಯಲ್ಲಿ ನಡೆಯಲಿರುವ ಹಾಕಿ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆಡಲಿದೆ. ಭಾರತವು ಸಿ ಗುಂಪಿನಲ್ಲಿ ಜರ್ಮನಿ, ಐರ್ಲೆಂಡ್ ಮತ್ತು ನಮೀಬಿಯಾ ಜೊತೆ ಸ್ಪರ್ಧಿಸಲಿದೆ.
ಈ ವರ್ಷ ಪಂದ್ಯಾವಳಿಗೆ ಗಮನಾರ್ಹ ವಿಸ್ತರಣೆ ಕಂಡುಬಂದಿದೆ. 24 ತಂಡಗಳು ಮೊದಲ ಬಾರಿಗೆ ಭಾಗವಹಿಸುತ್ತಿವೆ. ಈ ಹಿಂದಿನ ಆವೃತ್ತಿಗಳಲ್ಲಿ ಕೇವಲ 16 ತಂಡಗಳು ಭಾಗವಹಿಸಿತ್ತು. ಪಂದ್ಯಾವಳಿಯ 11 ನೇ ಆವೃತ್ತಿಯು ಡಿಸೆಂಬರ್ 1 ರಿಂದ 13ರವರೆಗೆ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿದೆ.
2013 ರಲ್ಲಿ ಜರ್ಮನಿಯ ಮೊಂಚೆಂಗ್ಲಾಡ್‌ಬಾಚ್‌ನಲ್ಲಿ ನಡೆದ ಮಹಿಳಾ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿತು. 2022 ರ ಆವೃತ್ತಿಯಲ್ಲಿ ತಂಡವು ಮತ್ತೊಮ್ಮೆ ಪೋಡಿಯಂ ಫಿನಿಶ್ ಅನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು. ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿತು.
ಇಲ್ಲಿಯವರೆಗೆ ಪ್ರಶಸ್ತಿಯನ್ನು ಗೆಲ್ಲದಿದ್ದರೂ ಭಾರತ ಜೂನಿಯರ್ ಸರ್ಕ್ಯೂಟ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿ ಉಳಿದಿದೆ. ಇತ್ತೀಚೆಗೆ, ಗೋಲ್‌ಕೀಪರ್ ನಿಧಿ ನಾಯಕತ್ವದ ಭಾರತ ತಂಡವು ಅರ್ಜೆಂಟೀನಾದಲ್ಲಿ ನಡೆದ 4-ರಾಷ್ಟ್ರಗಳ ಟೂರ್ನಮೆಂಟ್‌ನಲ್ಲಿ ಮಿಶ್ರ ಪ್ರದರ್ಶನ ನೀಡಿದೆ. ಇದನ್ನು ಜೂನಿಯರ್ ವಿಶ್ವಕಪ್‌ಗೆ ಪೂರ್ವಸಿದ್ಧತಾ ಕಾರ್ಯಕ್ರಮವೆಂದು ಪರಿಗಣಿಸಲಾಗಿದೆ. ಅಲ್ಲಿ ನಾಲ್ಕು ಪಂದ್ಯ ಗೆದ್ದರೆ ಕೇವಲ ಎರಡು ಪಂದ್ಯದಲ್ಲಿ ಸೋಲಾಗಿದೆ.
ಇದನ್ನೂ ಓದಿ : ಹಾಕಿ ಪಂದ್ಯದ ನಡುವೆ ಪಾಕಿಗಳ ಕಿರಿಕ್ – ಹಿಮ್ಮೆಟ್ಟಿಸಿದ ಹುಲಿಪಡೆ! VIDEO