ಕೆನಡಾ: ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿರುವ ಘಟನೆ ಕೆನಡಾದ ಒಂಟಾರಿಯೋದಲ್ಲಿ ನಡೆದಿದೆ.
ವಿಂಡ್ಸರ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇಬ್ಬರು ದುಷ್ಕರ್ಮಿಗಳು ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಚಿತ್ರಗಳನ್ನು ಬಿಡಿಸುವುದು ಕಂಡುಬಂದಿದೆ. ಈ ದ್ವೇಷಪೂರಿತ ಘಟನೆಯ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ .
ದೇವಸ್ಥಾನದ ಗೋಡೆಯಲ್ಲಿ ದುಷ್ಕರ್ಮಿಗಳು ಹಿಂದುಸ್ತಾನ್ ಮುರ್ದಾಬಾದ್ ಮತ್ತು ಮೋದಿಯನ್ನು ಭಯೋತ್ಪಾದಕ ಎಂದು ಘೋಷಿಸಿ ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.
ಜನವರಿ ತಿಂಗಳಲ್ಲಷ್ಟೇ ಕೆನಡಾದ ಬ್ರಾಮ್ಟನ್ ನಲ್ಲಿ ಇಂತಹ ಇನ್ನೊಂದು ಘಟನೆ ನಡೆದಿತ್ತು.