ಯುಗಾದಿ ಹೊಸತೊಡಕು ಆಚರಣೆ ವೇಳೆ ಹಲಾಲ್ ಮಾಂಸ ನಿಷೇಧಿಸಿ ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.
ಯುಗಾದಿಯ ಹೊಸತೊಡಕಿನ ಸಮಯದಲ್ಲಿ ಹಿಂದೂ ಸಮಾಜವು ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಿ, ‘ಹಲಾಲ್ ಮುಕ್ತ ಯುಗಾದಿ’ ಆಚರಿಸಿ’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಕರೆ ನೀಡಿದರು.
ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಮೋಹನ್ ಗೌಡ ಇಂದು ದೇಶದ ಅರ್ಥವ್ಯವಸ್ಥೆಗೆ ಪರ್ಯಾಯವಾಗಿ ಹಲಾಲ್ ಪ್ರಮಾಣಪತ್ರದ ಮೂಲಕ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಹಲಾಲ್ ಪ್ರಮಾಣಪತ್ರದಿಂದ ಸಂಗ್ರಹಿತ ಹಣವನ್ನು ಜಮಿಯತ್ ಉಲೆಮಾ ಹಿಂದ್ ಸಂಘಟನೆಯು ಭಯೋತ್ಪಾದನಾ ಚಟುವಟಿಕೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳಿಗೆ ಕಾನೂನು ಸಹಾಯ ಮಾಡುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಹೀಗಾಗಿ ಹಲಾಲ್ ವಿರೋಧವಷ್ಟೇ ಅಲ್ಲ ಅದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ರು.