ಚಿಕ್ಕಮಗಳೂರು: ಚಿಕ್ಕಮಗಳೂರಿನ ಧಾರ್ಮಿಕ ವಿವಾದಿತ ಸ್ಥಳವಾಗಿರುವ ದತ್ತಪೀಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆಗೆ ಹಿಂದೂ ಸಂಘಟನೆಗಳು ಮುಂದಾಗಿವೆ. ಆದರೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನಿರಾಕರಿಸಿದೆ. ಸ್ಥಳದಲ್ಲಿ ಭದ್ರತೆ ಕಾಯ್ದುಕೊಳ್ಳಲು 800ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ದತ್ತಪೀಠದಲ್ಲಿ ಹೋಳಿ ಹುಣ್ಣಿಮೆ ಹಿನ್ನೆಲೆ, ಹಿಂದೂ ಸಂಘಟನೆಗಳು ಹೋಳಿ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಔಂದುಬರ ವೃಕ್ಷದ ಬಳಿ ಹೋಳಿ ಆಚರಣೆಗೆ ಅನುಮತಿ ಕೇಳಲಾಗಿತ್ತು. ಆದರೆ ಮಾರ್ಚ್ 15 ರಿಂದ 3 ದಿನಗಳ ಕಾಲ ಉರುಸ್ ಆಚರಣೆ ಹಿನ್ನೆಲೆ ಹೋಳಿ ಆಚರಣೆಗೆ ಜಿಲ್ಲಾಡಳಿತ ಅನುಮತಿಯನ್ನು ನಿರಾಕರಿಸಿದೆ.
ಇದೀಗ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದತ್ತಪೀಠ ಹಾಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 800 ಕ್ಕೂ ಅಧಿಕ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.