ಲಕ್ನೋ: ಕೋಮು ಸಂಘರ್ಷ ಸೃಷ್ಟಿಗೆ ಗೋಹತ್ಯೆಗೈದು ಆ ಮೂಲಕ ಷಡ್ಯಂತ್ರ ನಡೆಸಿದ ಆರೋಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಇಬ್ಬರು ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ 7 ಮಂದಿಯ ವಿರುದ್ಧ ಲುಕ್ ಔಟ್ ನೊಟಿಸ್ ಜಾರಿಗೊಳಿಸಲಾಗಿದೆ.
ಗೋಹತ್ಯೆ ನಡೆಸಿದ್ದು ಮಾತ್ರ ಅಲ್ಲದೆ ಗೋಹತ್ಯೆಯ ಆರೋಪವನ್ನು ನಾಲ್ವರು ಮುಸ್ಲಿಮರ ವಿರುದ್ಧ ಹೊರಿಸಿ, ನಕಲಿ ಎಫ್ ಐಆರ್ ದಾಖಲಿಸಿದ ಆರೋಪವೂ ಇವರ ಮೇಲಿದೆ.
ಪ್ರಕರಣದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಪ್ರಮುಖ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಲ್ವರು ಮುಸ್ಲಿಮರ ವಿರುದ್ಧ ಆರೋಪಿಗಳಿಗೆ ದ್ವೇಷವಿದ್ದು, ಆ ದ್ವೇಷಕ್ಕೆ ಈ ರೀತಿ ಪ್ರತೀಕಾರ ತೀರಿಸಿದ್ದರು.
ಮುಸ್ಲಿಂ ಯುವಕರ ಮೇಲೆ ಆರೋಪ ಹೊರಿಸಲು ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಹತ್ಯೆ ಮಾಡಿದ್ದರು. ಆದರೆ ತನಿಖೆ ನಡೆಸಿದಾಗ ಮುಸ್ಲಿಂ ಯುವಕರ ಪಾತ್ರ ಇಲ್ಲ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.