Saturday, January 25, 2025
Homeಟಾಪ್ ನ್ಯೂಸ್ವರುಣಾದಲ್ಲಿ ಹೈ ವೋಲ್ಟೇಜ್‌ ಕದನ: ಸಿದ್ದರಾಮಯ್ಯ vs ವಿಜಯೇಂದ್ರ?

ವರುಣಾದಲ್ಲಿ ಹೈ ವೋಲ್ಟೇಜ್‌ ಕದನ: ಸಿದ್ದರಾಮಯ್ಯ vs ವಿಜಯೇಂದ್ರ?

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿದೆ. ಸಿದ್ದರಾಮಯ್ಯ ಆಪ್ತ ಮೂಲದ ಪ್ರಕಾರ ವರುಣಾದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ನಡುವೆ, ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ವಿಜಯೇಂದ್ರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಹೀಗಾಗಿ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿ ವರುಣ ನಿರ್ಮಾಣವಾಗುತ್ತಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡಾ ಈ ಬಗ್ಗೆ ಸುಳಿವು ನೀಡಿದ್ದು, ಸಿದ್ದರಾಮಯ್ಯ ವಿರುದ್ಧ ಬಲಿಷ್ಠ ಅಭ್ಯರ್ಥಿ ಇಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಬಿವೈ ವಿಜಯೇಂದ್ರ ಅವರ ಹೆಸರು ವರುಣಾ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಬಿಎಸ್‌ವೈ ಹೇಳಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲೂ ವಿಜಯೇಂದ್ರ ಸ್ಪರ್ಧೆಗೆ ತೀವ್ರ ಒತ್ತಡ ಹಾಕಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ವಿಜಯೇಂದ್ರಗೆ ವರುಣಾ ಟಿಕೆಟ್ ಕೈತಪ್ಪಿತ್ತು.

ವಿಜಯೇಂದ್ರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, ನಮಗೆ ಎದುರಾಳಿ ಅಭ್ಯರ್ಥಿ ಯಾರಾದರೂ ಚಿಂತೆ ಇಲ್ಲ ಎಂದಿದ್ದಾರೆ. ಬಿಎಸ್‌ವೈಯೇ ಬಂದು ಸ್ಪರ್ಧಿಸಲಿ ಎಂದು ಡಿಕೆಶಿ ಕೂಡಾ ಸವಾಲು ಹಾಕಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!