Monday, January 20, 2025
Homeದೇಶಪಾಕಿಸ್ತಾನದ ಅಪ್ಪ - ಬೆಂಗಳೂರಿನ ಅಮ್ಮ : ಭಾರತದ ಪೌರತ್ವಕ್ಕಾಗಿ ಮಕ್ಕಳ ಅರ್ಜಿ!

ಪಾಕಿಸ್ತಾನದ ಅಪ್ಪ – ಬೆಂಗಳೂರಿನ ಅಮ್ಮ : ಭಾರತದ ಪೌರತ್ವಕ್ಕಾಗಿ ಮಕ್ಕಳ ಅರ್ಜಿ!

ಬೆಂಗಳೂರು: ಪಾಕ್ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಬಳಿಕ ವಿಚ್ಛೇದಿತರಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮಕ್ಕಳಿಗೆ ಭಾರತದ ಪೌರತ್ವ ನೀಡಲು ನ್ಯಾಯಾಲಯ ನಿರಾಕರಿಸಿದೆ. ತನ್ನ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕರ್ನಾಟಕ ಹೈಕೋರ್ಟ್‍ಗೆ ಮಹಿಳೆ ಅರ್ಜಿ ಸಲ್ಲಿಸಿದ್ದಳು.
ಬೆಂಗಳೂರು ಮೂಲದ ಮಹಿಳೆ ಅಮಿನಾ ರಾಹಿಲ್, ಪಾಕಿಸ್ತಾನ ಮೂಲದ ಅಸದ್ ಮಲಿಕ್ ಜೊತೆ 2002ರಲ್ಲಿ ವಿವಾಹವಾಗಿದ್ದಳು. ದುಬೈನಲ್ಲಿ ನೆಲೆಸಿದ್ದ ಈ ದಂಪತಿಗೆ ಎರಡು ಮಕ್ಕಳೂ ಆಗಿತ್ತು. ಬಳಿಕ 2014 ರಲ್ಲಿ ದುಬೈನಲ್ಲೇ ವಿಚ್ಛೇದನ ಪಡೆದು ಬೇರಾಗಿದ್ದರು. ಮಕ್ಕಳ ಪಾಲನೆಯ ಹಕ್ಕನ್ನು ತಾಯಿಗೆ ನೀಡಲಾಗಿದ್ದರೂ ದುಬೈನಲ್ಲಿ ಜೀವನ ಕಷ್ಟವಾದ ಕಾರಣ ತಾಯಿ ಮನೆಗೆ ತೆರಳಲು ಅಮಿನಾ ರಾಹಿಲ್ ನಿರ್ಧರಿಸಿದ್ದರು. ಭಾರತದ ಪಾಸ್ ಪೌರ್ಟ್ ಸಹ ಹೊಂದಿರದ ಈ ಮಕ್ಕಳಿಗೆ ಮಾನವೀಯತೆಯ ಆಧಾರದ ಮೇಲೆ ತಾತ್ಕಾಲಿಕ ಪಾಸ್ ಪೋರ್ಟ್ ನೀಡಲಾಗಿತ್ತು.
ಅಮೀನಾ ಭಾರತದ ಪ್ರಜೆಯಾದರೂ 17 ಮತ್ತು 14 ವರ್ಷದ ಮಕ್ಕಳು ತಂದೆಯಿಂದ ಪಾಕ್ ಪೌರತ್ವ ಹೊಂದಿದ್ದಾರೆ. ಇವರಿಗೆ ಭಾರತದ ಪೌರತ್ವ ನೀಡಲು ಕಾನೂನು ತೊಡಕು ಎದುರಾಗಿದ್ದು, ಪಾಕ್ ಪೌರತ್ವ ತ್ಯಜಿಸಿದ ಬಳಿಕ ಮಕ್ಕಳು ಭಾರತದ ಪೌರತ್ವ ಪಡೆಯಬೇಕಿದೆ.

ಹೆಚ್ಚಿನ ಸುದ್ದಿ

error: Content is protected !!