ಜೈಪುರ: 71 ಜನರನ್ನು ಬಲಿ ಪಡೆದು, 180ಕ್ಕೂ ಹೆಚ್ಚುಜನರು ಗಾಯಾಳುಗಳಾದ 2008ರ ಜೈಪುರ ಸರಣಿ ಸ್ಪೋಟ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದೆ.
ಪ್ರಕರಣದ ಆರೋಪಿಗಳಿಗೆ ಟ್ರಯಲ್ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದು, ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.
ಇದೀಗ ಜಸ್ಟಿಸ್ ಪಂಕಜ್ ಭಂಡಾರಿ ಮತ್ತು ಸಮೀರ್ ಜೈನ್ ಅವರ ವಿಭಾಗೀಯ ಪೀಠ ಈ ತೀರ್ಪು ಕೊಟ್ಟಿದೆ.
2008ರ ಮೇ 13ರಂದು ಸಂಭವಿಸಿದ್ದ ಈ ಸ್ಪೋಟದಿಂದ ಜೈಪುರ ನಡುಗಿಹೋಗಿತ್ತು. ಈ ಸರಣಿ ಸ್ಪೋಟದಲ್ಲಿ 71. ಮಂದಿ ಮೃತಪಟ್ಟು 185 ಜನರು ಗಾಯಗೊಂಡಿದ್ದರು.