Monday, January 19, 2026
Homeಟಾಪ್ ನ್ಯೂಸ್BENGALURU RAIN : ಮುಸ್ಸಂಜೆಲಿ ಭಾರೀ ಮಳೆ - ವರುಣಾರ್ಭಟಕ್ಕೆ ಬೆಂಗಳೂರಿನಲ್ಲಿ ಹಲವು ಅವಾಂತರ :...

BENGALURU RAIN : ಮುಸ್ಸಂಜೆಲಿ ಭಾರೀ ಮಳೆ – ವರುಣಾರ್ಭಟಕ್ಕೆ ಬೆಂಗಳೂರಿನಲ್ಲಿ ಹಲವು ಅವಾಂತರ : VIDEO

ಬೆಂಗಳೂರು : ಇಂದು (ಮೇ 13) ಸಂಜೆ ನಗರದ ಹಲವೆಡೆ ಒಂದು ಗಂಟೆ ಧಾರಾಕಾರ ಮಳೆಯಾಗಿದ್ದು ಬೆಂಗಳೂರಿಗರು ಹೈರಾಣಾಗಿದ್ದಾರೆ. ನಗರದ ವಸಂತನಗರ, ಕಬ್ಬನ್ ಪಾರ್ಕ್ ರಸ್ತೆ, ರಿಡ್ಕಂಡ್ ಸರ್ಕಲ್ ಜೆಸಿ ರೋಡ್, ಕೆಂಗೇರಿ, ಮೈಸೂರು ರಸ್ತೆ, ಬನಶಂಕರಿ, ಜಯನಗರ, ವೈಟ್‌ಫೀಲ್ಡ್,, ಮಾರ್ಕೆಟ್, ಲಾಲ್ ಬಾಗ್,ಮೈಸೂರು ಬ್ಯಾಂಕ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

ಇನ್ನು ಸಂಜೆ ಹೊತ್ತಿಗೆ ಮಳೆ ಬಂದಿದ್ರಿಂದ ವಾಹನ ಸವಾರರು ಮಳೆಗೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಮತ್ತೊಂದೆಡೆ ನಗರದ ಹಲವೆಡೆ ಮರಗಳು ಧರೆಗುರುಳಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಹಲವಿ ಕಡೆಗಳಲ್ಲಿ ರಸ್ತೆ ಸಂಪೂರ್ಣ ಮಳೆ ನೀರಿನಿಂದ ಆವೃತ್ತವಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಇನ್ನು ಮಳೆಯ ಪರಿಣಾಮ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಳೆಯ ನಡುವೆ ರಸ್ತೆಯಲ್ಲಿ ಸಿಲುಕಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ. ಇನ್ನು ನಗರದ ಕೆಲವು ಭಾಗದಲ್ಲಿ ಮಳೆ ಮುಂದುವರೆದಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!