Tuesday, May 19, 2026
Homeಟಾಪ್ ನ್ಯೂಸ್HEART ATTACK : ಹೃದಯಾಘಾತಕ್ಕೆ ಹೆಡ್ ಕಾನ್ಸ್ ಸ್ಟೇಬಲ್ ಬ*ಲಿ - ಧಿಡೀರ್‌ ಹೃದಯಾಘಾತದ ಲಕ್ಷಣಗಳೇನು...

HEART ATTACK : ಹೃದಯಾಘಾತಕ್ಕೆ ಹೆಡ್ ಕಾನ್ಸ್ ಸ್ಟೇಬಲ್ ಬ*ಲಿ – ಧಿಡೀರ್‌ ಹೃದಯಾಘಾತದ ಲಕ್ಷಣಗಳೇನು ಗೊತ್ತೇ.?

ಬೆಂಗಳೂರು : ರಾಜ್ಯದಲ್ಲಿ ಹೃದಯಘಾತ Heart Attack) ಪ್ರಕರಣ ಮತ್ತೆ ಹೆಚ್ಚಳವಾಗಿದ್ದು, ಇದೀಗ ಕರ್ತವ್ಯಕ್ಕೆ ಹೋರಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು (Police Constable) ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ.

ಮೃತ ದುರ್ದೈವಿಯನ್ನು ಬೇಗೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ನಿಜಾಮುದ್ದೀನ್ (44) ಎಂದು ಗುರುತಿಸಲಾಗಿದೆ. ಆಡುಗೋಡಿ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸವಿದ್ದ ನಿಜಾಮುದ್ದೀನ್ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ರೆಡಿಯಾಗುತ್ತಿದ್ದಾಗ ದಿಢೀರ್ ಕುಸಿದು ಬಿದ್ದಿದ್ದಾರೆ.

ಆಡುಗೋಡಿ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸವಿದ್ದ ನಿಜಾಮುದ್ದೀನ್ ಅವರು ಎಂದಿನಂತೆ ಎದ್ದು ಠಾಣೆಗೆ ಹೋಗಲು ಸಜ್ಜಾಗುತ್ತಿದ್ದರು. ಈ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತೀವ್ರ ಎದೆ ನೋವು ಉಂಟಾದ ಹಿನ್ನಲೆ ದಿಢೀರ್ ಆಗಿ ಕುಸಿದಿದ್ದಾರೆ, ಈ ವೇಳೆ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ.

ಇನ್ನು ರಾಜಸ್ಥಾನದಲ್ಲಿ ಕೂಡ ಹೃದಯಾಘಾತಕ್ಕೆ 9 ವರ್ಷದ ಬಾಲಕಿ ಪ್ರಾಚಿ ಕುಮಾವತ್ ಸಾವನ್ನಪ್ಪಿದ್ದು, ಮಧ್ಯಾಹ್ನದ ಊಟಕ್ಕೆ ಹೋಗುತ್ತಿದ್ದ ವೇಳೆ ಬಾಲಕಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ : ಪಾಠ ಮಾಡುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ : ಶಾಲೆಯಲ್ಲೇ ಟೀಚರ್ ಸಾವು

ಹೃದಯಾಘಾತದ ಲಕ್ಷಣಗಳು ಯಾವುವು.?

ಎದೆ ನೋವು: ಮೊದಲೆಲ್ಲ ವಯಸ್ಸಾದವರಿಗೆ ಮಾತ್ರ ಹೃದಯಾಘಾತವಾಗುತ್ತಿತ್ತು. ಆದರೆ ಈಗ ಯುವಕರನ್ನ ಸಹ ಇದು ಕಾಡುತ್ತಿದೆ. ಈ ಹೃದಯಾಘಾತದ ಲಕ್ಷಣಗಳಲ್ಲಿ ಮೊದಲೆನೆಯದು ಎದೆನೋವು. ಕೆಲವೊಮ್ಮೆ ಸಣ್ಣದಾಗಿ ಎದೆ ನೋವು ಖಾಣಿಸುತ್ತದೆ, ಇನ್ನು ಕೆಲವೊಮ್ಮೆ ಜೋರಾಗಿ ನೋವಾಗುತ್ತದೆ. ಬೆನ್ನಿನಲ್ಲಿ, ಎಡಗೈ ಹಾಗೂ ಮೇಲಿನ ದವಡೆಯಲ್ಲಿ ನೋವು ಸಹ ಕಾಣಿಸುತ್ತದೆ. ಈ ರೀತಿ ಕಾಣಿಸಿದಾಗ ನೆಗ್ಲೆಕ್ಟ್‌ ಮಾಡಬಾರದು.

ತಲೆ ಸುತ್ತು ಬರುವುದು: ತಲೆಸುತ್ತು ಅನೇಕ ಕಾರಣಗಳಿಗಾಗಿ ಬರುತ್ತದೆ. ಆದರೆ ನಿಮಗೆ ಎದೆನೊಔು ಇದ್ದು ಹಾಗೂ ಉಸಿರಾಟದ ಸಮಸ್ಯೆ ಇದ್ದಾಗ ತಲೆಸುತ್ತು ಬಂದರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪದೇ ಪದೇ ತಲೆಸುತ್ತು ಬಂದರೆ ಅದು ಬಿಪಿ ಕಡಿಮೆಯಾಗುವುದರ ಲಕ್ಷಣವಾಗಿದೆ.

ಎದೆಯಲ್ಲಿ ಬಿಗಿತ: ಎದೆ ನೋವು ಹಾಗೂ ಎದೆ ಬಿಗಿತ ಎರಡೂ ಬೇರೆ ಬೇರೆಯಾಗಿದ್ದು, ಎದೆಯಲ್ಲಿ ಏನೋ ಹಿಡಿದ ಹಾಗೆ ಅನುಭವ ಆದರೆ ಅದೂ ಸಹ ಹೃದಯಾಘಾತದ ಲಕ್ಷಣವಾಗಿದೆ. ರಕ್ತನಾಳ ನಿರ್ಬಂಧಿಸಲ್ಪಟ್ಟಿದ್ದರೆ ಹೃದಯ ಸ್ನಾಯುಗಳಿಗೆ ಆಮ್ಲಜನಕವನ್ನು ಪಡೆಯಲು ಕಷ್ಟವಾಗುತ್ತದೆ ಆ ಸಮಯದಲ್ಲಿ ಬಿಗಿದ ಅನುಭವ ಆಗುತ್ತದೆ. ಈ ಬಿಗಿತ ದೇಹದ ಬೇರೆ ಭಾಗಗಳಲ್ಲಿ ಸಹ ಉಂಟಾಗಬಹುದು.

ಬೆವರುವುದು: ಸಾಮಾನ್ಯವಾಗಿ ಬಿಸಿಲು ಜಾಸ್ತಿ ಇದ್ರೆ ಅಥವಾ ಸೆಖೆ ಜಾಸ್ತಿ ಇದ್ದಾಗ ಮನುಷ್ಯ ಬೆವರುತ್ತಾನೆ. ಆದರೆ ಇದು ಯಾವುದೂ ಇಲ್ಲದೇ ಹೆಚ್ಚು ಬೆವರುತ್ತಿದ್ದರೆ ಅದೂ ಸಹ ಒಂದು ಪ್ರಮುಖ ಲಕ್ಷಣವಾಗಿದೆ. ಅನೇಕ ಬಾರಿ ಎದೆನೋವು ಹಾಗೂ ಎದೆ ಬಿಗಿತ ಖಾಣಿಸುವ ಮೊದಲು ಬೆವರುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣವಿಲ್ಲದೇ ಬೆವರುತ್ತಿದ್ದರೆ ವೈದ್ಯರ ಬಳಿ ಹೋಗಿ.

ಸ್ನಾಯು ಸೆಳೆತ: ಅನೇಕ ಕಾರಣಗಳಿದ ಸಾಯು ಸೆಳೆತ ಉಂಟಾಗುತ್ತದೆ. ನೋವಿದ್ದರೆ ಅಥವಾ ಹೆಚ್ಚಿನ ಕೆಲಸ ಆಗಿದ್ದರೆ. ಆದರೆ ಬೆನ್ನಿನ ಮೇಲ್ಭಾಗದಲ್ಲಿ ಹಾಗೂ ಭುಜಗಳಲ್ಲಿ ಏನೂ ಆಗದೆ ಸ್ನಾಯು ಸೆಳೆತ ಆಗುತ್ತಿದ್ದರೆ ಇದನ್ನ ಹೃದಯಾಘಾತದ ಲಕ್ಷಣ ಎಂದು ಪರಿಗಣಿಸಬಹುದು.

ಇನ್ನು ಕೆಲವೊಮ್ಮೆ ಆರೋಗ್ಯದ ಅನುಸಾರ ಲಕ್ಷಣಗಳು ಬದಲಾಗಬಹುದು, ಆದರೆ ಈ ಲಕ್ಷಣಗಳು ಬಹಳ ಪ್ರಮುಖವಾಗಿದೆ. ಕೆಲವರಿಗೆ ಲಕ್ಷಣಗಳಿಲ್ಲದೇ ಹೃದಯಾಘಾತ ಆಗುತ್ತದೆ. ಅದು ಬಹಳ ಅಪಾಯಕಾರಿ. ಮುಖ್ಯವಾಗಿ ನಮ್ಮ ಜೀವನಶೈಲಿ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತದೆ. ಹಾಗಾಗಿ ಒತ್ತಡವನ್ನ ನಿವಾರಿಸಿಕೊಂಡು ಸಾಧ್ಯವಾದಷ್ಟು ಉತ್ತಮ ಜೀವನಶೈಲಿಯನ್ನ ಅಳವಡಿಸಿಕೊಂಡರೆ ಒಳ್ಳೆಯದು.

ಹೆಚ್ಚಿನ ಸುದ್ದಿ

Change Language »
error: Content is protected !!