ಆಂಧ್ರಪ್ರದೇಶ : ಇಲ್ಲಿನ ವಿಜಯನಗರ ಜಿಲ್ಲೆಯ ಬೊಬ್ಬಿಲಿ ಮಂಡಲದ ಪೆಂಟಾ ಝಡ್‌ಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಿಂತಾ ರಮಣ ಅವರು ತಮ್ಮ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಟಿತವಾದ ಕಾರಣ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮುಂದೆ ತಮ್ಮನ್ನು ತಾವೇ ಶಿಕ್ಷಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
విజయనగరం జిల్లా, బొబ్బిలి మండలం, పెంట జెడ్పీ హైస్కూల్ హెడ్మాస్టర్ చింత రమణ గారు పిల్లల విద్యా పురోగతి అంతంతమాత్రంగా ఉందని, చెప్పిన మాట వినడంలేదని….విద్యార్థులను దండించకుండా, గుంజీలు తీసిన వీడియో సోషల్ మీడియా ద్వారా నా దృష్టికి వచ్చింది. హెడ్మాస్టరు గారూ!… pic.twitter.com/Se7zu6uwf5
— Lokesh Nara (@naralokesh) March 13, 2025
ಹೌದು, ಈಗ ಕಾಲ ಮೊದಲಿನಂತಿಲ್ಲ.. ಶಾಲೆಯಲ್ಲಿ ಶಿಕ್ಷಕರಾಗಲಿ ಅಥವಾ ಮನೆಯಲ್ಲಿ ಪೋಷಕರಾಗಲಿ ಮಕ್ಕಳನ್ನು ದಂಡಿಸಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡಬೇಕು.ಇನ್ನು ಶಿಕ್ಷಕರು ಮೊದಲಿನಂತೆ ಈಗ ವಿದ್ಯಾರ್ಥಿಗಳನ್ನು ದೈಹಿಕವಾಗಿ ಶಿಕ್ಷಿಸಲು ಅವಕಾಶವೇ ಇಲ್ಲ. ಹೀಗಾಗಿ ಮಕ್ಕಳನ್ನು ಸರಿ ದಾರಿಗೆ ತರಲು ಮುಖ್ಯೋಪಾಧ್ಯಾಯರು ತಾವೇ ಈ ರೀತಿ ಮಕ್ಕಳ ಮುಂದೆ ಬಸ್ಕಿ ಹೊಡೆದು ಓದಿನ ಕಡೆ ಗಮನ ಕೊಡುವಂತೆ ವಿದ್ಯಾರ್ಥಿಗಳಲ್ಲಿ ಹೇಳಿದ್ದಾರೆ.
ಈ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಎಷ್ಟು ಬಾರಿ ವಿದ್ಯಾರ್ಥಿಗಳಲ್ಲಿ ಓದಿನ ಕಡೆ ಗಮನ ಕೊಡಲು ಹೇಳಿದರೂ ಸಹ ಮಕ್ಕಳಲ್ಲಿ ಯಾವುದೇ ಬದಲಾವಣೆ ಬಾರದ ಕಾರಣ, ಅವರ ಮನಸ್ಸನ್ನು ಪರಿವರ್ತಿಸುವ ನಿಟ್ಟಿನಲ್ಲಿ ಹೆಡ್ ಮಾಸ್ಟರ್ ಈ ರೀತಿ ಮಾಡಿದ್ದಾರೆ. ಶಿಕ್ಷಕರ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಈ ರೀತಿಯಾಗಿ ಮಕ್ಕಳನ್ನು ತಿದ್ದುವುದು ಬಹಳ ಉತ್ತಮವಾದ ಯೋಚನೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.