Monday, August 17, 2026
Homeಟಾಪ್ ನ್ಯೂಸ್HDK Vs SUMALATHA : ಮಂಡ್ಯದಲ್ಲಿ ಕದನವಿರಾಮ - ಸುಮಲತಾ ನನಗೆ ಅಕ್ಕ ಎಂದ ಹೆಚ್‌ಡಿಕೆ

HDK Vs SUMALATHA : ಮಂಡ್ಯದಲ್ಲಿ ಕದನವಿರಾಮ – ಸುಮಲತಾ ನನಗೆ ಅಕ್ಕ ಎಂದ ಹೆಚ್‌ಡಿಕೆ

ಮಂಡ್ಯ : ಮಂಡ್ಯ ಲೋಕಸಭಾ(Mandya lokasabha election) ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲ ಕೆರಳಿಸಿದ್ದು ಮೈತ್ರಿಯಲ್ಲಿ ಮಂಡ್ಯ ಜೆಡಿಎಸ್‌ (JDS)ಪಾಲಾಗಿದೆ. ಜೊತೆಗೆ 5 ವರ್ಷಗಳ ಕಾಲ ಸುಮಲತಾ , ಹೆಚ್‌ಡಿಕೆ ನಡುವೆ ನಡೆದ ರಾಜಕೀಯ ಸಂಘರ್ಷ ಕೊನೆಗೊಂಡಿದೆ.

ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಹೆಚ್‌ಡಿಕೆ, ಸುಮಲತಾ ನನಗೆ ಅಕ್ಕ ಇದ್ದಂತೆ, ಆಗ ಏನೇನೋ ನಡೆದಿತ್ತು. ಸಾಕು ಇನ್ನು ಸಂಘರ್ಷ ಮುಂದುವರೆಸಲ್ಲ ಎಂದು ಹೇಳಿದ್ದಾರೆ. ಅಂಬರೀಷ್ ನಾವೆಲ್ಲ ಒಟ್ಟಾಗಿ ಬೆಳದವರು, ನಮ್ಮ ಪಕ್ಷದಿಂದಲೇ ಅವರು ಪಾರ್ಲಿಮೆಂಟ್‌ ಪ್ರವೇಶಿಸಿದ್ದರು , ನಾನು ಸಿಎಂ ಆದಾಗಲೇ ರಾಜ್‌ಕುಮಾರ್‌ ಹಾಗೂ ಅಂಬರೀಷ್‌ ನಿಧನರಾಗಿದ್ದರು . ರಾಜ್‌ಕುಮಾರ್‌ ಸಮಾಧಿ ಮಾಡಿದ್ದು , ಅಂಬರೀಶ್ ಸಮಾಧಿಗೆ ಜಾಗ ಗುರುತಿಸಿದ್ದು ಕೂಡ ನಾನೇ , ಅಂಬರೀಷ್ಗೆ ಗೌರವ ನೀಡುವ ಮೂಲಕ ಮಂಡ್ಯ ಜನರಿಗೆ ನೀಡಿದ್ದೇವೆ  ಎಂದರು.

2019ರಲ್ಲಿ ಮೈತ್ರಿ ಎಂದು ಕುತ್ತಿಗೆ ಕುಯ್ದರು , ಈಗ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿದೆ. ನಮ್ಮಿಂದ ರಾಜಕೀಯವಾಗಿ ಕೆಲವು ತಪ್ಪುಗಳು ಆಗಿರಬಹುದು ಆ ತಪ್ಪುಗಳನ್ನು ತಿದ್ದಿಕೊಳ್ಲಲು ಸಿದ್ದರಿದ್ದೇವೆ ಒಂದು ಅವಕಾಶ ಕೊಡಿ ಎಂದರು.

ನಿಖಿಲ್ ಸ್ಪರ್ಧೆ ಪಕ್ಕಾ?

ಇಂದಿನ ಸಭೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅಥವಾ ಹೆಚ್‌ಡಿಕೆ ಲೋಕಸಭೆ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕಿದ್ದು, ಹೆಚ್‌ಡಿಕೆ ನಿಖಿಲ್ ಪರವಾಗಿ ಮಾತನಾಡಿದ್ದಾರೆ. ಹೀಗಾಗಿ ಮಂಡ್ಯದಿಂದ ನಿಖಿಲ್ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದ್ದು , ಮಾ.25ಕ್ಕೆ ಘೋಷಣೆಯಾಗುವ ಸಾಧ್ಯತೆ ಇದೆ.

 

 

ಹೆಚ್ಚಿನ ಸುದ್ದಿ

Change Language »
error: Content is protected !!