Thursday, March 20, 2025
Homeಬೆಂಗಳೂರುಒಂದು ಕಡೆ ಸಫಾರಿ-ಮತ್ತೊಂದೆಡೆ ಸುಪಾರಿ : ಮೋದಿ ಬಗ್ಗೆ ಎಚ್‍ಡಿಕೆ ಟೀಕೆ

ಒಂದು ಕಡೆ ಸಫಾರಿ-ಮತ್ತೊಂದೆಡೆ ಸುಪಾರಿ : ಮೋದಿ ಬಗ್ಗೆ ಎಚ್‍ಡಿಕೆ ಟೀಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಹಾಗೂ ಅಮುಲ್ ನಂದಿನಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಒಂದು ಕಡೆ ಸಫಾರಿ, ಇನ್ನೊಂದು ಕಡೆ ಸುಪಾರಿ ಇದು ಬಿಜೆಪಿಯು ಆದಿಯಿಂದ ನಡೆದುಕೊಂಡು ಬಂದಿರುವ ದಾರಿ ಎಂದು ಟೀಕಿಸಿದ್ದಾರೆ. ಕೆಎಂಎಫ್ ಮತ್ತು ನಂದಿನಿ ವಿಷಯದಲ್ಲೂ ಸಹ ಆ ಪಕ್ಷದ್ದು ಅದೇ ವರಸೆ. ಸ್ಲೋಗನ್ ನಲ್ಲಿ ಮಾತ್ರ “ಬಿಜೆಪಿಯೇ ಭರವಸೆ” ಇದೇ ನೋಡಿ ಅದರ ಅಸಲಿ ವರಸೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಾಜ್ಯಪ್ರವಾಸ ಹಾಗೂ ಬಂಡಿಪುರ ಸಫಾರಿ ಬಗ್ಗೆ “ಬಿಜೆಪಿಯ ವರಸೆ” ಎಂಬ ಅಂಕಿತದ ಅಡಿಯಲ್ಲಿ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಚ್.ಡಿ.ಕುಮಾರಸ್ವಾಮಿ, ಪ್ರಧಾನಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಅವರು ಚುನಾವಣೆಯ ಹೊತ್ತಿನಲ್ಲಿ ತಮ್ಮೆಲ್ಲ ಅಗಾಧ ಕಾರ್ಯಭಾರ ಬದಿಗಿಟ್ಟು ಸಫಾರಿ ಮಾಡಿಹೋಗಿದ್ದಾರೆ. ಸ್ಥಳಕ್ಕೊಂದು ಪೋಷಾಕು, ಧರಿಸುವ ಅವರ ಬಗ್ಗೆ ಮಾತಾಡಿದರೆ ನನಗೆ ಅವರ ದಿರಿಸಿನ ಬಗ್ಗೆ ಗೊತ್ತೇ ಇಲ್ಲ ಎನ್ನುವುದು ಸಚಿವ ಅಶ್ವತ್ಥ ನಾರಾಯಣ್ ಅವರ ಕುಹಕದ ಮಾತು ಎಂದು ಎಚ್‍ಡಿಕೆ ಟ್ವೀಟಿಸಿದ್ದಾರೆ.
ಜೊತೆಗೆ, ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು. 2008 ರಲ್ಲೇ ಅಮುಲ್ ನ್ನು ಕನ್ನಡಿಗರ ಮೇಲೆ ನಂದಿನಿಯ ಕತ್ತು ಹಿಸುಕುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿರುವ ಕುಮಾರಸ್ವಾಮಿ, ಅಂದು ಕೆಎಂಎಫ್ ಅಧ್ಯಕ್ಷರಾಗಿದ್ದ ಎಚ್.ಡಿ. ರೇವಣ್ಣ ಅವರು ಯಾವಕಾರಣಕ್ಕೂ ರಾಜ್ಯಕ್ಕೆ ಅಮುಲ್ ಪ್ರವೇಶಿಸಲು ಬಿಡುವುದಿಲ್ಲ ಎಂದಿದ್ದರು. ಆದರೆ ಇಂದು ಬಿಜೆಪಿ ರಾಜ್ಯ ನಾಯಕಾರು ಮೋದಿಯವರನ್ನು ಮೆಚ್ಚಿಸಲು ಅಮುಲ್ ಪರವಾಗಿ ನಿಂತಿದ್ದಾರೆ ಎಂದಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!