ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ ಈಗಾಗಲೇ ಪಂಚರತ್ನ ರಥಯಾತ್ರೆ ಮೂಲಕ ಶೇ 50 ರಷ್ಟು ಪ್ರಚಾರ ಮುಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಪ್ರಣಾಳಿಕೆಯೂ ಸಿದ್ಧವಾಗಿದ್ದು, ಆಟೋ ಚಾಲಕರಿಗೆ 2000 ಕೊಡುತ್ತೇವೆ ಅಂತ ಹೇಳಿದ್ದೇನೆ. ಅಂಗನವಾಡಿ ಕಾರ್ಯಕರ್ತರಿಗೆ ಅವರು ಏಳು ಸಾವಿರ ಕೆಲಸ ಜೊತೆ ಪಿಂಚಣಿ ನೀಡಲು ನಾವು ಚಿಂತಿಸಿದ್ದೇವೆ. ಇದೆಲ್ಲವೂ ನಾವು ಅಧಿಕಾರಕ್ಕೆ ಬಂದ ಮೇಲೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ರು.
ಇನ್ನು ಜೆಡಿಎಸ್ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ದವಾಗಿದೆ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದ ಅವರು, 120 ಮತ್ತು 130 ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದ್ರು.
ಕಳೆದ ಬಾರಿ ಚನ್ನಪಟ್ಟಣದಲ್ಲಿ ಒತ್ತಡ ಇದ್ದ ಕಾರಣ ಅಲ್ಲಿಂದ ಸ್ಪರ್ಧಿಸಿದ್ದೆ. ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸೋದಾಗಿ ಹೇಳಿದ ಕುಮಾರಸ್ವಾಮಿ, ನಾನು ಎರಡು ಕ್ಷೇತ್ರದಲ್ಲಿ ಈ ಬಾರಿ ನಿಲ್ಲುವ ಬಗ್ಗೆ ಚರ್ಚೆ ಆಗಿಲ್ಲ. ನಾನು ಮಂಡ್ಯದಲ್ಲಿ ನಿಲ್ಲಬೇಕು ಅಂತ ಕಾರ್ಯಕರ್ತರ ಒತ್ತಾಯ ಇದೆ ಆದರೆ, ಆ ಬಗ್ಗೆ ಚರ್ಚೆ ಮಾಡೋಕೆ ಹೋಗಬೇಡಿ ಎಂದು ಹೇಳಿದ್ದೇನೆ ಎಂದ್ರು
ಇನ್ನು ಕೆಲವು ಕ್ಷೇತ್ರಗಳಲ್ಲಿ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಪ್ರಚಾರ ಮಾಡ್ತಾರೆ. ಇದು ಅವರ ಆಸೆ. ನಾವು ಪ್ರಚಾರ ಕಾರ್ಯ ಬೇಡ ಡಂದ್ರೆ ಅವರು ಬೇಸರಗೊಳ್ತಾರೆ, ಜೊತೆಗೆ ಅವರು ಪ್ರಚಾರಕ್ಕೆ ಹೋದ್ರೆ ಇಡಿ ರಾಜ್ಯಕ್ಕೆ ಸಂದೇಶ ರವಾನೆ ಆಗುತ್ತೆ. ಈ ಬಾರಿ ಯಾವುದೇ ಪಕ್ಷದೊಂದಿಗೆ ನಾವು ಹೊಂದಾಣಿಯೂ ಇಲ್ಲ, ರಾಜಿಯೂ ಮಾಡಿಕೊಳ್ಳದೇ ಚುನಾವಣೆ ಎದುರಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ರು