ಪಂಚರತ್ನ ಯಾತ್ರೆಯಲ್ಲಿ ನಿರತರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಿಶಿಷ್ಟ ರೀತಿಯಲ್ಲಿ ಅಹವಾಲು ಒಂದು ಬಂದಿದೆ.
ಯಶವಂತಪುರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹೆಚ್‌ಡಿಕೆಗೆ ‘ಕೆಎಮ್ಎಫ್’ ಅನ್ನು ಗುಜರಾತಿಗಳಿಂದ ಉಳಿಸಿ ಎಂದು ರೈತರು ಮನವಿ ಸಲ್ಲಿಸಿದ್ದಾರೆ.
‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್‌ಅನ್ನು ಉಳಿಸಿ’ ಎಂಬ ಸಾಲು ಇರುವ ಬ್ಯಾನರ್ ಅನ್ನು, ಹಾಲು, ಮೊಸರಿನ ಪ್ಯಾಕೆಟ್‌ಗಳಿಂದ ತಯಾರಿಸಲಾದ ಹಾರದೊಂದಿಗೆ ಅಳವಡಿಸಿ ಕುಮಾರಸ್ವಾಮಿ ಅವರಿಗೆ ಹಾಕಲಾಗಿದೆ.
ಕೆಎಮ್‌ಎಫ್ ಹಾಗೂ ಗುಜರಾತಿನ ಅಮೂಲ್ ಸಂಸ್ಥೆ ಒಟ್ಟಿಗೆ ಕೆಲಸ ಮಾಡಿದರೆ ಇನ್ನೂ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬಳಿಕ ಕೆಎಮ್‌ಎಫ್ ಅಮೂಲ್ ಜೊತೆ ವಿಲೀನಗೊಳ್ಳುವ ಬಗ್ಗೆ ರೈತರು ಆತಂಕಗೊಂಡಿದ್ದಾರೆ.