Saturday, May 16, 2026
Homeಟಾಪ್ ನ್ಯೂಸ್HD KUMARASWAMY: ಪಕ್ಷ ಬಿಟ್ಟು ಹೋದ ಯಾವೊಬ್ಬ ಅಲ್ಪಸಂಖ್ಯಾತ ನಾಯಕರು​​ ನನ್ನ ಟಚ್​​​​​​​ನಲ್ಲಿ ಇಲ್ಲ: ಹೆಚ್​​​​​ಡಿಕೆ

HD KUMARASWAMY: ಪಕ್ಷ ಬಿಟ್ಟು ಹೋದ ಯಾವೊಬ್ಬ ಅಲ್ಪಸಂಖ್ಯಾತ ನಾಯಕರು​​ ನನ್ನ ಟಚ್​​​​​​​ನಲ್ಲಿ ಇಲ್ಲ: ಹೆಚ್​​​​​ಡಿಕೆ

ಬೆಂಗಳೂರು: ಜೆಡಿಎಸ್ (Jds) ಗ್ರೇಟರ್ ಬೆಂಗಳೂರು (Bengaluru) ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy)ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ‘ಅಹಿಂದ’ ಮತ್ತು ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ನಾಯಕರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರ ನಿಜವಾದ ಅಭಿವೃದ್ಧಿಗೆ ಕಾಂಗ್ರೆಸ್ ಒತ್ತು ನೀಡುತ್ತಿಲ್ಲ ಎಂದಿದ್ದಾರೆ. ಹಿಂದೆ ಮುಸ್ಲಿಂ ಸಮುದಾಯದ ನಾಯಕರನ್ನು ಬೆಂಬಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಅವರು ಗೈರುಹಾಜರಾಗಿದ್ದನ್ನು ಸ್ಮರಿಸಿದ ಕುಮಾರಸ್ವಾಮಿ, ಅಧಿಕಾರ ಹೋದಾಗ ಮಾತ್ರ ಅವರಿಗೆ ಈ ಸಮುದಾಯಗಳು ನೆನಪಾಗುತ್ತವೆ ಎಂದು ಕುಟುಕಿದರು. ಇದೇ ವೇಳೆ ಪಕ್ಷ ಬಿಟ್ಟುಹೋದ ಯಾವುದೇ ಮುಸ್ಲಿಂ ನಾಯಕರು ನನ್ನ ಸಂಪರ್ಕದಲ್ಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ : 2 ವರ್ಷದ ಬಳಿಕ ವಿಧಾನಸೌಧಕ್ಕೆ ಎಂಟ್ರಿ, ಎಲ್ಲಾ ಭಗವಂತನ ಇಚ್ಛೆ ಅಂದಿದ್ಯಾಕೆ ಹೆಚ್​​​​​ಡಿಕೆ?

ರಾಜ್ಯದ ಸರ್ವತೋಮುಖ ಅಭಿವೃದ್ಧಿಗಿಂತ ಹೆಚ್ಚಾಗಿ ಜಾತಿಗಳ ನಡುವೆ ಭೇದಭಾವ ಮೂಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರಗಾರಿಕೆಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು.ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಕೇವಲ ಬೂಟಾಟಿಕೆಯ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಸಮಾಜವನ್ನು ಒಡೆಯುವ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು. ರಾಜ್ಯದ ಅಭಿವೃದ್ಧಿಗೆ ಗ್ರಹಣ ಹಿಡಿದಿದ್ದು, ಜನತೆ ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬಿದರೆ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!