ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ನಿಧರಾದ ಬೆನ್ನಲ್ಲೇ ಇದೀಗ ನಂಜನಗೂಡು ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕಣದಿಂದ ಹಿಂದೆ ಸರಿದಿದ್ದಾರೆ.
ಇಂದು ದಿವಂಗತ ಧೃವನಾರಾಐಣ್ ಮನೆಗೆ ತೆರಳಿ ಅವರ ಪುತ್ರ ದರ್ಶನ್ ಧೃವನಾರಾಯಣ್ ಜೊತೆ ಮಾತುಕತೆ ನಡೆಸಿದ ಮಹದೇವಪ್ಪ ಈ ನಿರ್ಧಾರ ಪ್ರಕಟಿಸಿದ್ರು.
ಈ ವೇಳೆ ಮಾತನಾಡಿದ ಮಹದೇವಪ್ಪ ನನಗೆ ನನ್ನ ಮಗ ಬೇರೆ ಅಲ್ಲ, ದರ್ಶನ್ ಬೇರೆ ಅಲ್ಲ.. ದರ್ಶನ್‌ಗೋಸ್ಕರ ನಾನು ಕ್ಷೇತ್ರ ಬಿಟ್ಟುಕೊಟ್ಟು ದರ್ಶನ್ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.