Saturday, March 15, 2025
Homeಕ್ರೈಂCRIME : ನರ್ಸ್‌ ಕೊಲೆಗೈದು ನಾಲೆಗೆ ಎಸೆದಿದ್ದ ಪಾಪಿ ಅರೆಸ್ಟ್‌ - ಹತ್ಯೆಗೆ ಕಾರಣ ನಿಗೂಢ.!

CRIME : ನರ್ಸ್‌ ಕೊಲೆಗೈದು ನಾಲೆಗೆ ಎಸೆದಿದ್ದ ಪಾಪಿ ಅರೆಸ್ಟ್‌ – ಹತ್ಯೆಗೆ ಕಾರಣ ನಿಗೂಢ.!

ಹಾವೇರಿ : ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ರಮೇಶ್ ಬ್ಯಾಡಗಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ರಾಣೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.

ಮಾ.6 ರಂದು ಸ್ವಾತಿಯ ಮೃತದೇಹ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ಯುವತಿಯ ಶವ ಎಂದು ಘೋಷಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವವನ್ನು ಹೂತು ಹಾಕಲಾಗಿತ್ತು.

ಇದಾಗಿ ಎರಡು ಮೂರು ದಿನದ ಬಳಿಕ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನಲ್ಲಿ ಸ್ವಾತಿಯನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಬಳಿಕ ಸುತ್ತಮುತ್ತ ಪೊಲೀಸ್ ಠಾಣೆಯಲ್ಲಿ ಮಹಿಳೆ ಮಿಸ್ಸಿಂಗ್ ದೂರು ದಾಖಲಾಗಿದೆಯೇ ಎಂದು ಪರಿಶೀಲಿಸಿದ್ದಾರೆ.

ಆದರೆ ಈ ವೇಳೆ ಸ್ವಾತಿ ಪೋಷಕರು ಮಾರ್ಚ್ 3 ರಂದು ಹಿರೇಕೇರೂರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿರುವುದು ತಿಳಿದು ಬಂದಿದೆ. ಈ ವೇಳೆ ತನಿಖೆ ನಡೆಸಿ ಆರೋಪಿ ನಯಾಜ್‌ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!