ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಸಾಲು ಸಾಲು ವಿವಾದಗಳು (Shocking) ಸೃಷ್ಟಿಯಾಗುತ್ತಿವೆ. ರಾಮನಗರದಲ್ಲಿ ಎಸ್ಐಆರ್ ಕುರಿತು ಕೇಳಿಬಂದಿದ್ದ ವಿವಾದದ ಕಿಡಿ ಆರುವ ಮುನ್ನವೇ, ಇದೀಗ ಹಾವೇರಿ (Haveri) ಜಿಲ್ಲೆಯಲ್ಲೂ ಇಂತಹುದೇ ಮತ್ತೊಂದು ದೊಡ್ಡ ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿ, ಮಸೀದಿಯ ಕಚೇರಿಯೊಳಗೆ ಕುಳಿತುಕೊಂಡು ಎಸ್ಐಆರ್ ಫಾರ್ಮ್ಗಳನ್ನು ಭರ್ತಿ ಮಾಡಲಾಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಬಂಕಾಪೂರ ಪಟ್ಟಣದ ಮೋಮಿನ್ ಮಸೀದಿಯ ಕಚೇರಿಯೊಳಗೆ ಕುಳಿತುಕೊಂಡು ಅಧಿಕೃತ ಚುನಾವಣಾ ದಾಖಲೆಗಳನ್ನು ಭರ್ತಿ ಮಾಡುತ್ತಿದ್ದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಬಂಕಾಪೂರದ 185ನೇ ಬೂತ್ನ ಬಿಎಲ್ಒ (BLO) ಆಗಿರುವ ರೂಪಾ ಮಾನೆ ಎಂಬುವವರೇ ಈ ರೀತಿ ಮಸೀದಿ ಕಚೇರಿಯೊಳಗೆ ಕುಳಿತು ಕೆಲಸ ನಿರ್ವಹಿಸಿದ ಸಿಬ್ಬಂದಿಯಾಗಿದ್ದು, ಇವರ ವಿರುದ್ಧ ಚುನಾವಣಾ ನಿಯಮಗಳ ಸ್ಪಷ್ಟ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ನಿಗದಿಪಡಿಸಿದ ಸರ್ಕಾರಿ ನಿಯಮಾವಳಿಗಳಿಗಿಂತ ಮಸೀದಿಯ ಕಚೇರಿಗೇ ಹೆಚ್ಚಿನ ಆದ್ಯತೆ ನೀಡಲ ರಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಮಸೀದಿಯಲ್ಲಿ ಕುಳಿತು ಫಾರ್ಮ್ ಭರ್ತಿ ಎನ್ನಲಾದ ವಿಡಿಯೋ ಹಂಚಿಕೊಂಡ ಸಚಿವ ಪ್ರಲ್ಹಾದ್ ಜೋಶಿ!
ಮಸೀದಿಯೊಳಗಿನ ಬಿಎಲ್ಒ ರೂಪಾ ಮಾನೆ ಅವರ ಫೋಟೋ ಮತ್ತು ವಿಡಿಯೋಗಳು ಹೊರಬೀಳುತ್ತಿದ್ದಂತೆ ರಾಜಕೀಯ ವಲಯದಲ್ಲೂ ಭಾರಿ ಚರ್ಚೆ ಹಾಗೂ ಆಪಾದನೆಗಳು ಶುರುವಾಗಿವೆ. ನಿರಂತರವಾಗಿ ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ ಇಂತಹ ಲೋಪದೋಷಗಳು ಮತ್ತು ವಿವಾದಗಳು ಎದುರಾಗುತ್ತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಉನ್ನತ ಚುನಾವಣಾ ಅಧಿಕಾರಿಗಳು ಬಿಎಲ್ಒ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.