Thursday, March 12, 2026
Homeಟಾಪ್ ನ್ಯೂಸ್HASSAN: ರಥದ ಬಟ್ಟೆ ಮೇಲೆ ರಾಜಕೀಯ ಕರಿನೆರಳು, ರೇವಣ್ಣ-ಶ್ರೇಯಸ್ ಪಟೇಲ್ ಮಧ್ಯೆ ಕಿತ್ತಾಟ!

HASSAN: ರಥದ ಬಟ್ಟೆ ಮೇಲೆ ರಾಜಕೀಯ ಕರಿನೆರಳು, ರೇವಣ್ಣ-ಶ್ರೇಯಸ್ ಪಟೇಲ್ ಮಧ್ಯೆ ಕಿತ್ತಾಟ!

ಹಾಸನ: ರಾಜಕೀಯ ಕಿತ್ತಾಟದ ನಡುವೆಯೂ ಹೊಳೆನರಸೀಪುರದಲ್ಲಿ (Hole Narasipura) ನಡೆದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ (Lakshmi Narasimha swamy) ರಥೋತ್ಸವ ಭಕ್ತಿಭಾವದಿಂದ ಶಾಂತವಾಗಿ ನೆರವೇರಿತು. ರಥದ ಅಲಂಕಾರ (Decoration) ಕುರಿತು ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಜಿಲ್ಲಾಡಳಿತ ತೆರೆ ಎಳೆದಿದ್ದು, ಈ ಬಾರಿ ರಥವನ್ನು ಸಂಪೂರ್ಣ ಹೂಗಳಿಂದಲೇ ಸಿಂಗಾರಿಸಲಾಯಿತು, ಯಾವುದೇ ಬಟ್ಟೆ ಬಳಸಲಿಲ್ಲ.

ಹೌದು, ವಾರ್ಷಿಕ ಉತ್ಸವದ ಅಂಗವಾಗಿ ರಥದ ಬಟ್ಟೆ ಬದಲಾವಣೆ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಹೊಸ ಬಟ್ಟೆ ಹೊದಿಸಬೇಕೋ ಅಥವಾ ಹಳೆಯದ್ದನ್ನೇ ಮುಂದುವರಿಸಬೇಕೋ ಎಂಬ ಪ್ರಶ್ನೆ ನಾಯಕರ ನಡುವೆ ತೀವ್ರ ತರ್ಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ : ಯಡವಟ್ಟು ಮಾಡಿಕೊಂಡ್ರಾ ಮಾಜಿ ಸಿಎಂ ಯಡಿಯೂರಪ್ಪ?

ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ಲಕ್ಷಾಂತರ ರೂ. ವೆಚ್ಚ ಮಾಡಿ ಹೊಸ ಬಟ್ಟೆ ಸಿದ್ಧಪಡಿಸಿದ್ದರು.ಆದರೆ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ, ದೇವರ ಕಾರ್ಯಕ್ಕೆ ಕೇವಲ ಒಬ್ಬರಿಂದಲೇ ಹಣ ಸ್ವೀಕರಿಸಿರುವುದನ್ನು ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದರು.

ಈ ವಿವಾದ ತೀವ್ರಗೊಂಡ ಕಾರಣ ಅಧಿಕಾರಿಗಳು ಮಧ್ಯಪ್ರವೇಶಿಸಿ ಹಳೆಯ ಬಟ್ಟೆಯನ್ನು ತೆರವುಗೊಳಿಸಿದರು. ಆ ಬಳಿಕ ಸಂಪೂರ್ಣ ರಥವನ್ನು ಹೂವಿನ ಅಲಂಕಾರದಿಂದ ಸಜ್ಜುಗೊಳಿಸಿ ನಗರ ಬೀದಿಗಳಲ್ಲಿ ಸಂಚರಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಯಾವುದೇ ಅಹಿತಕರ ಘಟನೆ ಇಲ್ಲದೆ ಉತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.

ಹೆಚ್ಚಿನ ಸುದ್ದಿ

Change Language »
error: Content is protected !!