ಹಾಸನ : ಶಕ್ತಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಾಸನ ಜಿಲ್ಲಾಡಳಿತದ ವಿರುದ್ಧ ಭಕ್ತರ ಸಿಟ್ಟು ಹೊರಹಾಕುತ್ತಿದ್ದು, ಇದಕ್ಕೆ ನಾಲಾಯಕ್ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹಾಗೂ ದರ್ಪತನ ತೋರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಡೆ ಖಂಡನೀಯ ಎಂದು ಜೆಡಿಎಸ್ ಟೀಕಿಸಿದೆ.
ಟ್ವೀಟ್ ಮಾಡಿ, ರಾಜ್ಯದ ಬೇರೆ ಬೇರೆ ಕಡೆಯಿಂದ ದೇವಿಯ ದರ್ಶನಕ್ಕೆ ಬಂದಿರುವ ಭಕ್ತಾಧಿಗಳ ಮೇಲೆ ಪೊಲೀಸರ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಭಕ್ತರು 1000 ರೂ., 300 ರೂ. ಕೊಟ್ಟು ಪಾಸ್ ಗಳನ್ನು ಖರೀದಿಸಿದ್ದರೂ ಗಂಟೆ ಗಟ್ಟಲೇ ಕಾಯುವ ಶಿಕ್ಷೆ ಎಂದು ಕಿಡಿಕಾರಿದೆ.