Thursday, March 27, 2025
Homeದೇಶಹನುಮನ ವಿಗ್ರಹ ಧ್ವಂಸ: ಓರ್ವ ಬಂಧನ, ಅಂತರ್ಜಾಲ ಸೇವೆ ಸ್ಥಗಿತ

ಹನುಮನ ವಿಗ್ರಹ ಧ್ವಂಸ: ಓರ್ವ ಬಂಧನ, ಅಂತರ್ಜಾಲ ಸೇವೆ ಸ್ಥಗಿತ

ರಾಂಚಿ: ಇಲ್ಲಿಯ ದೇವಸ್ಥಾನವೊಂದರಲ್ಲಿದ್ದ ಒಂದೂವರೆ ಅಡಿ ಎತ್ತರದ ಹನುಮನ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಜನ ಸ್ಥಳೀಯರು ದೇವಾಲಯದ ಬಳಿ ರಸ್ತೆ ತಡೆದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಧರಣಿ ನಡೆಸಿದ್ದಾರೆ. ಗುಂಪು ಚದುರಿಸಲು ಲಾಠಿ ಚಾರ್ಜ್‌ ನಡೆಸಲಾಗಿದೆ. ಜತೆಗೆ ಮುಂಜಾಗೃತಾ ಕ್ರಮವಾಗಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಿಗ್ರಹ ದ್ವಂಸಗೊಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾನಿಗೊಂಡ ವಿಗ್ರಹವನ್ನು ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸ್‌ ಉಪ ಆಯುಕ್ತ ರಾಮ್‌ನಿವಾಸ್ ಯಾದವ್‌ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!