Saturday, January 25, 2025
Homeಆಧ್ಯಾತ್ಮಹನುಮ ಜಯಂತಿ: ಅಂಜನಾದ್ರಿ ಬೆಟ್ಟದಲ್ಲಿ ಭಕ್ತ ಸಾಗರ

ಹನುಮ ಜಯಂತಿ: ಅಂಜನಾದ್ರಿ ಬೆಟ್ಟದಲ್ಲಿ ಭಕ್ತ ಸಾಗರ

ಕೊಪ್ಪಳ: ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿದೆ.

ಹನುಮ ಜನಿಸಿದ ನಾಡು ಎಂದು ಹೆಸರಾಗಿರುವ ಅಂಜನಾದ್ರಿಯಲ್ಲಿ ಆಂಜನೇಯನ ಮೂರ್ತಿಗೆ ನಸುಕಿನ ಜಾವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಹೋಮ ಹವನ ನಡೆದವು. ಸಾವಿರಾರು ಭಕ್ತರು ಬುಧವಾರ ರಾತ್ರಿಯೇ ಬಂದು ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಉಳಿದುಕೊಂಡು ಬೆಳಗಿನ ಜಾವದಲ್ಲಿಯೇ ಬೆಟ್ಟದ 575 ಮೆಟ್ಟಿಲುಗಳನ್ನು ಏರಿ ಆಂಜನೇಯನ‌ ದರ್ಶನ ಪಡೆದರು.

ಕೇಸರಿ ಬಣ್ಣದ ಮಾಲೆ ಹಾಕಿಕೊಂಡು ತಲೆ ಮೇಲೆ ಮುಡಿ ಹೊತ್ತುಕೊಂಡು ಬಂದ ಭಕ್ತರು ಆಂಜನೇಯನ ಸನ್ನಿಧಿಯಲ್ಲಿ ಮುಡಿ ಬಿಚ್ಚಿ ಪೂಜೆ ಸಲ್ಲಿಸಿ ಹನುಮವ್ರತ ಪೂರ್ಣಗೊಳಿಸಿದರು. ಭಕ್ತರಿಂದ ಜೈ ಶ್ರೀರಾಮ್ ಘೋಷಣೆಗಳು‌ ಮೊಳಗಿದವು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿರಲಿಲ್ಲ. ದೇವಸ್ಥಾನದ ವತಿಯಿಂದಲೇ ಈ ಸೌಲಭ್ಯ ಕಲ್ಪಿಸಲಾಗಿತ್ತು.

ಹೆಚ್ಚಿನ ಸುದ್ದಿ

error: Content is protected !!