Friday, March 13, 2026
Homeಟಾಪ್ ನ್ಯೂಸ್IND - PAK WAR : ಭಾರತ - ಪಾಕ್ ಯುದ್ಧ - ಹೆಚ್​ಎಎಲ್ ಸಿಬ್ಬಂದಿಯ...

IND – PAK WAR : ಭಾರತ – ಪಾಕ್ ಯುದ್ಧ – ಹೆಚ್​ಎಎಲ್ ಸಿಬ್ಬಂದಿಯ ರಜೆ ರದ್ದು.! 

ಬೆಂಗಳೂರು : ಭಾರತ ಹಾಗೂ ಪಾಕ್ ನಡುವೆ ಯುದ್ಧ ಆರಂಭವಾಗಿದ್ದು, ಪಾಕ್ ನ ಈ ಮೊಂಡಾಟಕ್ಕೆ ಭಾರತ ತಕ್ಕ ಉತ್ತರ ನೀಡುತ್ತಲೇ ಇದೆ. ಆದರೂ ಕೂಡ ಸುಮ್ಮನಾಗದ ಪಾಪಿ ಪಾಕ್ ಭಾರತದ 15 ನಗರಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಿದೆ.

ಪಾಕ್ ನಡೆಸುತ್ತಿರುವ ದಾಳಿಗೆ ಭಾರತವು ಮೂರರಷ್ಟು ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಿ ಅನೇಕ ನಗರಗಳಲ್ಲಿ ಉಡೀಸ್ ಮಾಡಲಾಗಿದೆ. ಇದರಿಂದ ಕಂಗೆಟ್ಟ ಪಾಕ್ ಭಾರತದ 15 ನಗರಗಳ ಮೇಲೆ ಏನಾದರೂ ಮಾಡಿ ದಾಳಿ ನಡೆಸಲು ಸಜ್ಜಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಹೆಚ್​ಎಎಎಲ್​​ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್​ಎಎಎಲ್​​ನ ಎಲ್ಲ ಸಿಬ್ಬಂದಿಯ ರಜೆ ರದ್ದುಗೊಳಿಸಲಾಗಿದ್ದು, ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗುವ ಸಾದ್ಯತೆ ಇದೆ ಹೀಗಾಗಿ ಓವರ್ ಟೈಂ ಕೆಲಸಕ್ಕೆ ಸಿದ್ಧರಿರುವಂತೆ ಸೂಚಿಸಲಾಗಿದೆ. 

ಯುದ್ಧ ವಿಮಾನಗಳ ನಿರ್ವಹಣೆಯ ಕಾರಣ ಕಡ್ಡಾಯ ಹಾಜರಿರುವಂತೆ ಸಿಬ್ಬಂದಿಗೆ, ತಂತ್ರಜ್ಞರಿಗೆ ಸೂಚನೆ ನೀಡಲಾಗಿದೆ. ತುರ್ತು ಪರಿಸ್ಥಿತಿ ಎದುರಿಸಲು ತಯಾರಿ ನಡೆಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದೆ.

ಇನ್ನು ಪಾಕ್ ಕದನ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ ಸಾಕಷ್ಟು ನಷ್ಟ ಉಂಟಾಗಿದ್ದು, ಕ್ರಿಕೆಟ್ ಮೈದಾನ, ಬಂದರು, ಮಸೀದಿಗಳು ಸೇರಿದಂತೆ ಅನೇಕ ಕಟ್ಟಡಗಳು ನೆಲ ಸಮ ಮಾಡುವ ಮೂಲಕ ಭಾರತ ತಕ್ಕ ಉತ್ತರ ನೀಡಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!