Thursday, March 27, 2025
Homeಟಾಪ್ ನ್ಯೂಸ್‘ಬಸವರಾಜ ಬೊಮ್ಮಾಯಿ ಗಲ್ಲಿ ರೌಡಿ ರೀತಿಯಲ್ಲಿ ಮಾತನಾಡುತ್ತಿದ್ದಾರೆ’

‘ಬಸವರಾಜ ಬೊಮ್ಮಾಯಿ ಗಲ್ಲಿ ರೌಡಿ ರೀತಿಯಲ್ಲಿ ಮಾತನಾಡುತ್ತಿದ್ದಾರೆ’

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಲ್ಲಿ ರೌಡಿ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿ, ಸಿಎಂ ಸಿಟಿ ರೌಡಿ ತರ ಮಾತನಾಡಿದರೆ ಪರವಾಗಿಲ್ಲ. ಆದರೆ, ಗಲ್ಲಿ ರೌಡಿ ತರ ಮಾತನಾಡುತ್ತಿದ್ದಾರೆ. ನಮ್ಮ ರಾಜ್ಯ ಹಲವಾರು ಮುಖ್ಯಮಂತ್ರಿಗಳನ್ನು ಕಂಡಿದೆ. ಅವರ‍್ಯಾರು ಈ ರೀತಿಯಾಗಿ ಮಾತನಾಡಿಲ್ಲ. ಸಿಎಂ ಸ್ಥಾನದ ಘನತೆ ಗೌರವ ಇಲ್ಲದಾಗಿದೆ. ಧಮ್ಮು, ತಾಕತ್ತು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ, ಇದು ಶೇಮ್. ರಾಜಕಾರಣಿಗಳು ಹೀಗೆಲ್ಲಾ ಮಾತನಾಡಬಾರದು ಎಂದರು.

ಅಮೂಲ್ ರಾಜ್ಯದ ಮಾರುಕಟ್ಟೆ ಪ್ರವೇಶ ವಿಚಾರವಾಗಿ, ಎಲ್ಲವನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಂದಿನಿ ಕನ್ನಡಿಗರ ಅಸ್ಮಿತೆ. ಇದರಿಂದ ಸಾಕಷ್ಟು ಕುಟುಂಬ ಬದುಕುತ್ತಿದೆ. ಅದನ್ನು ತೆಗೆದುಕೊಂಡು ಗುಜರಾತ್‌ಗೆ ಅಡ ಇಟ್ಟರೆ ಯಾರೂ ಒಪ್ಪಲ್ಲ. ಒಂದು ದೇಶ ಒಂದು ಹಾಲು ಒಂದು ಕುರಿ ಎನ್ನುತ್ತಾರೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ

error: Content is protected !!