ಹಾಸನ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ದಂಪತಿ ಇಂದು ಹಾಸನಾಂಬೆಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಇಷ್ಟು ತಿಂಗಳ ಕಾಲ ಕೇಸು, ಕೋರ್ಟ್ ಈ ತಲೆ ಬಿಸಿಯ ನಂತರದಲ್ಲಿ ಮೊದಲ ಬಾರಿಗೆ ಹೆಚ್.ಡಿ ರೇವಣ್ಣ ಮತ್ತವರ ಪತ್ನಿ ಭವಾನಿ ರೇವಣ್ಣ ಅವರು ಒಟ್ಟಿಗೆ ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡರು. 1 ಸಾವಿರ ರೂಪಾಯಿ ಟಿಕೆಟ್ ಪಡೆದುಕೊಂಡು ರೇವಣ್ಣ ದಂಪತಿ ದೇವಿಯ ದರ್ಶನ ಮಾಡಿದಿದ್ದು, ನಾಲ್ಕುವರೆ ತಿಂಗಳ ನಂತರ ರೇವಣ್ಣ ಭವಾನಿ ಹಾಸನಕ್ಕೆ ಆಗಮಿಸಿದ್ದಾರೆ.
ಪ್ರತಿ ವರ್ಷವೂ ದೇವಸ್ಥಾನದ ಬಾಗಿಲು ತೆರೆದ ಬಳಿಕ ಮೊದಲು ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದ ದಂಪತಿ, ಗರ್ಭಗುಡಿ ಬಾಗಿಲು ತೆರೆದ ಒಂದು ವಾರದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಕಂಡುಬಂತು.