ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ಡಿಗ್ರಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೆಟ್ ಗಳನ್ನು ಪ್ರಧಾನಮಂತ್ರಿ ಕಚೇರಿ ಒದಗಿಸಬೇಕಾದ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾಮಂತ್ರಿಯವರ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯ ಪ್ರಮಾಣಪತ್ರಗಳ ಮಾಹಿತಿ ಕೋರಿದ್ದರು. ಇದರ ನಂತರ ಈ ಪ್ರಮಾಣಪತ್ರಗಳನ್ನು ಒದಗಿಸುವಂತೆ ಮುಖ್ಯ ಮಾಹಿತಿ ಆಯೋಗ ಪ್ರಧಾನಮಂತ್ರಿ ಕಚೇರಿ, ಗುಜರಾತ್ ವಿವಿ, ದಿಲ್ಲಿ ವಿವಿಗೆ ಆದೇಶಿಸಿತ್ತು. ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಗುಜರಾತ್ ವಿವಿ ನ್ಯಾಯಾಲಯದ ಮೊರೆ ಹೋಗಿತ್ತು.
ಗುಜರಾತ್ ವಿವಿಯ ಅರ್ಜಿ ಪುರಸ್ಕರಿಸಿದ ಗುಜರಾತ್ ನ್ಯಾಯಾಲಯ ಇದೀಗ ಪದವಿ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಮಾಹಿತಿ ಆಯೋಗಕ್ಕೆ ಹೇಳಿರುವುದಲ್ಲದೇ ಅರವಿಂದ್ ಕೇಜ್ರಿವಾಲ್‌ಗೆ 25,000 ದಂಡ ವಿಧಿಸಿದೆ.
ಕೋರ್ಟ್‌ನ ಈ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ ಈ ದೇಶದಲ್ಲಿ ಮಾಹಿತಿ ಕೇಳುವ ಹಕ್ಕು ಕೂಡಾ ಇಲ್ಲದಂತಾಗಿ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಆದರೆ ಇಂದು ಈ ಬಗ್ಗೆ ತೀರ್ಪು ನೀಡಿರುವ ಜಸ್ಟಿಸ್ ಬಿರೇನ್ ವೈಷ್ಣವ್ ಅವರ ಏಕಪೀಠ ಈ ಆದೇಶವನ್ನು ತಳ್ಳಿ ಹಾಕಿದೆ