ಜೆಡಿಎಸ್ ಪಕ್ಷದ ವರಿಷ್ಠರೊಂದಿಗೆ ಅಸಮಾಧಾನ ಹೊಂದಿರುವ ತುಮಕೂರಿನ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (ವಾಸು) ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿಧಾನಸಭೆ ಸಬಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ನಾನು ಸ್ವಯಿಚ್ಛೆಯಿಂದ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ತಾವುಗಳು ದಯಮಾಡಿ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಕರ್ನಾಟಕ ವಿಧಾಸಭೆ ಸಭಾಧ್ಯಕ್ಷರಲ್ಲಿ ವಿಶ್ವನಾಥ್ ಮನವಿ ಮಾಡಿಕೊಂಡಿದ್ದಾರೆ.
ಜೆಡಿಎಸ್‌ನಿಂದ ಉಚ್ಛಾಟಿತಗೊಂಡಿರುವ ವಿಶ್ವನಾಥ್, ರಾಜಿನಾಮೆ ನೀಡುವ ವಿಚಾರಕ್ಕೆ ಭಾವುಕರಾಗಿದ್ದು, ದೇವೇಗೌಡರು ನನ್ನನ್ನು ಮಗನಂತೆ ನೋಡಿಕೊಳ್ತಿದ್ರು. ದೇವೇಗೌಡರು, ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡಿದ್ದೇನೆ. ಇವತ್ತು ಭಾರವಾದ ಹೃದಯದಿಂದ, ನೋವಿನಿಂದ ಆ ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಕುಮಾರಸ್ವಾಮಿಯವರು ಕೂಡ ಒಡಹುಟ್ಟಿದ ತಮ್ಮನ ಹಾಗೆ ನನ್ನನ್ನು ನೋಡಿಕೊಂಡಿದ್ರು. ಅದ್ಯಾವ ಸಂದರ್ಭಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿದ್ರೋ ಗೊತ್ತಿಲ್ಲ. ಅತ್ಯಂತ ನೋವಿನಿಂದ ಜೆಡಿಎಸ್ ತೊರೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ