Wednesday, August 19, 2026
Homeಟಾಪ್ ನ್ಯೂಸ್GOOD NEWS: ಗೃಹಲಕ್ಷ್ಮಿ... ನಿದ್ರೆಗೆ ಜಾರುವ ಮುನ್ನ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

GOOD NEWS: ಗೃಹಲಕ್ಷ್ಮಿ… ನಿದ್ರೆಗೆ ಜಾರುವ ಮುನ್ನ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ( gruhalakshmi scheme) ಯೋಜನೆಯ ಫಲಾನುಭವಿಗಳಿಗೆ ಯೋಜನೆಯ 31ನೇ ಕಂತಿನ ಒಟ್ಟು ₹2,400 ಕೋಟಿ ರೂಪಾಯಿ ಹಣವನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ರಾಜ್ಯದ ಲಕ್ಷಾಂತರ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ತಲಾ ₹2,000 ಹಣ ಜಮೆಯಾಗಲು ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದಲ್ಲಿ ಈ ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಭಾರಿ ಪ್ರಮಾಣದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ಹಂಚಿಕೆ ಮಾಡಲಾಗಿದೆ.

ರಾಜ್ಯದ ಸುಮಾರು 1,24,48,000 (1.24 ಕೋಟಿಗೂ ಹೆಚ್ಚು) ಕುಟುಂಬದ ಯಜಮಾನಿಯರಿಗೆ ಈಗಾಗಲೇ ಕಳೆದ 30 ಕಂತುಗಳಲ್ಲಿ ತಲಾ ₹2,000 ರಂತೆ ಒಟ್ಟು ₹60,000 ಹಣವನ್ನು ಯಶಸ್ವಿಯಾಗಿ ವರ್ಗಾಯಿಸಲಾಗಿತ್ತು. 31ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗ 31ನೇ ಕಂತಿನ ಹಣವೂ ಬಿಡುಗಡೆಯಾಗಿದ್ದು, ಇದರೊಂದಿಗೆ ಪ್ರತಿಯೊಬ್ಬ ಗೃಹಲಕ್ಷ್ಮಿಯ ಖಾತೆಗೆ ಸರ್ಕಾರದ ವತಿಯಿಂದ ಜಮೆಯಾದ ಒಟ್ಟು ಮೊತ್ತ ಬರೋಬ್ಬರಿ ₹62,000 ತಲುಪಿದಂತಾಗಿದೆ.

ಮಹಿಳಾ ಸ್ವಾವಲಂಬನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ಹೆಜ್ಜೆಯಿಂದಾಗಿ, ಗೃಹಲಕ್ಷ್ಮಿ ಯೋಜನೆಗಾಗಿ ರಾಜ್ಯ ಸರ್ಕಾರ ಇದುವರೆಗೂ ಒಟ್ಟಾರೆಯಾಗಿ ₹74,650 ಕೋಟಿ ರೂಪಾಯಿಗಳನ್ನು ವ್ಯಯಿಸಿದಂತಾಗಿದೆ. ದೇಶದಲ್ಲೇ ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು ಮಹಿಳೆಯರ ಖಾತೆಗೆ ನೇರವಾಗಿ ವರ್ಗಾಯಿಸಿದ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ.

ಮಹಿಳೆಯರು ಈ ಆರ್ಥಿಕ ನೆರವನ್ನು ತಮ್ಮ ಕುಟುಂಬದ ದೈನಂದಿನ ಕೌಟುಂಬಿಕ ಖರ್ಚುಗಳು, ಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಇತರ ಅನಿವಾರ್ಯ ಅಗತ್ಯಗಳಿಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!