Saturday, April 26, 2025
Homeಟಾಪ್ ನ್ಯೂಸ್SALARY HIKE: ರಾಜ್ಯದ ಜನಪ್ರತಿನಿಧಿಗಳಿಗೆ ಭರ್ಜರಿ ಹೈಕ್-‌ ವೇತನ, ಭತ್ಯೆ ಹೆಚ್ಚಳಕ್ಕೆ ರಾಜ್ಯಪಾಲರಿಂದ ಒಪ್ಪಿಗೆ!

SALARY HIKE: ರಾಜ್ಯದ ಜನಪ್ರತಿನಿಧಿಗಳಿಗೆ ಭರ್ಜರಿ ಹೈಕ್-‌ ವೇತನ, ಭತ್ಯೆ ಹೆಚ್ಚಳಕ್ಕೆ ರಾಜ್ಯಪಾಲರಿಂದ ಒಪ್ಪಿಗೆ!

ಬೆಂಗಳೂರು: ಸಿಎಂ, ಸಚಿವರು, ಶಾಸಕರು, ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದ್ದು, ವೇತನ ಹೆಚ್ಚಳದ ಮಸೂದೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆ ಮತ್ತು ಕರ್ನಾಟಕ ವಿಧಾನಮಂಡಲದವರ ಸಂಬಳ, ಪಿಂಚಣಿ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆಯ ಕಡತಕ್ಕೆ ಗವರ್ನರ್ ಅಂಕಿತ ಹಾಕಿದ್ದಾರೆ.

ಸಂಬಳ ಎಷ್ಟು ಹೆಚ್ಚಳ?:
* ಸಿಎಂ – 75,000 ದಿಂದ 1,50,000 ರೂ.
* ಸಚಿವರು – 60,000 ದಿಂದ 1.25 ಲಕ್ಷ ರೂ.
* ಶಾಸಕರು – 40,000 ದಿಂದ 80,000 ರೂ.
* ಸ್ಪೀಕರ್ – 75,000 ದಿಂದ 1.25 ಲಕ್ಷ ರೂ.
* ಸಭಾಪತಿ – 75,000 ದಿಂದ 1.25 ಲಕ್ಷ ರೂ.
* ಸಿಎಂ, ಸಚಿವರ ಆತಿಥ್ಯ ಭತ್ಯೆ – 4.50 ಲಕ್ಷದಿಂದ 5 ಲಕ್ಷ ರೂ.
* ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ ರೂ.
* ಪಿಂಚಣಿ 50,000 ದಿಂದ 75,000 ರೂ.
* ಹೆಚ್ಚುವರಿ ಪಿಂಚಣಿ 5,000 ರಿಂದ 20,000 ರೂ.

ಹೆಚ್ಚಿನ ಸುದ್ದಿ

error: Content is protected !!