Thursday, July 16, 2026
Homeಟಾಪ್ ನ್ಯೂಸ್MENTAL HEALTH: ಮಾನಸಿಕ ಸಮಸ್ಯೆ ಹೇಳಿಕೊಳ್ಳಲು ಸರ್ಕಾರದಿಂದ ಹೆಲ್ಪ್‌ಲೈನ್‌

MENTAL HEALTH: ಮಾನಸಿಕ ಸಮಸ್ಯೆ ಹೇಳಿಕೊಳ್ಳಲು ಸರ್ಕಾರದಿಂದ ಹೆಲ್ಪ್‌ಲೈನ್‌

ಬೆಂಗಳೂರು: ಇಂದಿನ ಜೀವನಶೈಲಿ (Life Style), ಆಫೀಸ್‌ ಕೆಲಸಗಳು ಜನರಲ್ಲಿ ಒತ್ತಡವನ್ನ (Stress) ಹೆಚ್ಚು ಮಾಡುತ್ತಿದೆ. ಜನರಿಗೆ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ, ಒಂದೆಲ್ಲಾ ಒಂದು ಚಿಂತೆಗಳು ಕಾಡುತ್ತಲೇ ಇರುತ್ತದೆ. ಈ ಒತ್ತಡ ಜನರ ಜೀವನದ ಒಂದು ಭಾಗವಾಗಿ ಹೋಗಿದೆ. ಒತ್ತಡದ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು (Health Issue) ಸಹ ಬರುತ್ತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಾನಸಿಕ ಆರೋಗ್ಯ (Mental Health)  ಹದಗೆಡುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಸರ್ಕಾರ ಸಹಾಯವಾಣಿ (Helpline) ಈಗಾಗಲೇ ಪ್ರಾರಂಭ ಮಾಡಿದ್ದು, ಅದಕ್ಕೆ ಕರೆ ಮಾಡಿ ನಿಮ್ಮ ಕಷ್ಟವನ್ನ ಹೇಳಿಕೊಳ್ಳಬಹುದು.

ಮಾನಸಿಕ ಆರೋಗ್ಯ ದೊಡ್ಡ ಸವಾಲಾಗಿದೆ
ಕಾಂಪಿಟೇಷನ್‌ ಹೆಚ್ಚಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯವನ್ನ ಕಾಪಾಡಿಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲಾಗಿದೆ. ಜೀವನದಲ್ಲಿ ಚಿಂತೆಗಳು ಹೆಚ್ಚಾದಾಗ ಅದರಿಂದ ಒಂದೆಲ್ಲಾ ಒಂದು ಸಮಸ್ಯೆಗಳು ಬರುತ್ತದೆ. ಅದರಲ್ಲೂ ಮುಖ್ಯವಾಗಿ ಮಾನಸಿಕ ಆರೋಗ್ಯ ಹಾಗೂ ವೈಯಕ್ತಿಕ ಸಂಬಂಧಗಳು ಹಾಳಾಗುತ್ತದೆ. ಇದರಿಂದ ನೆಮ್ಮದಿ ಇರುವುದಿಲ್ಲ. ಇದಕ್ಕೆ ಪರಿಹಾರ ನೀಡಲು ಸರ್ಕಾರ ಟಿಲಿ ಮನಸ್‌ ಎನ್ನುವ ಸಹಾಯವಾಣಿ ಆರಂಭ ಮಾಡಿದ್ದು, ಜನ ಇದರ ಸದುಪಯೋಗ ಪಡೆಯಬಹುದಾಗಿದೆ.

ಇನ್ನು ಈ ಮಾನಸಿಕ ಆರೋಗ್ಯ ಕೇವಲ ಜೀವನದಲ್ಲಿನ ಒತ್ತಡದಿಂದ ಮಾತ್ರ ಹಾಳಾಗುವುದಿಲ್ಲ. ಕೆಲವೊಮ್ಮೆ ಯಾವುದೋ ಒಂದು ಕೆಟ್ಟ ಘಟನೆ, ಚಿಕ್ಕ ವಯಸ್ಸಿನಲ್ಲಿ ಮನಸ್ಸಿಗೆ ಆದ ಯಾವುದೋ ಗಾಯ ಜೀವನ ಪರ್ಯಂತ ನಮ್ಮನ್ನ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಅನೇಕ ಜನರು ತಮ್ಮ ಜೀವವನ್ನ ಬಲಿ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಇತ್ತೀಚಿನ ಯುವ ಜನತೆ ಸಣ್ಣ ಸಣ್ಣ ವಿಚಾರಗಳನ್ನ ಮನಸ್ಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಅವರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಆರೋಗ್ಯವಾಗಿ ಇರಬೇಕೇ..? ಹಾಗಾದ್ರೆ ಬೆಳಿಗ್ಗೆ ಕಾಫಿ ಟೀ ಬದಲು ಈ ಸ್ಮೂಥಿ ಕುಡಿಯಿರಿ

ಕೆಲವೊಂದು ಬಾರಿ ಪೋಷಕರಿಗೆ ಮಕ್ಕಳಲ್ಲಿ ಆಗುವ ಬದಲಾವಣೆಗಳು ತಿಳಿಯುವುದಿಲ್ಲ. ಇದರಿಂದ ಅವರನ್ನ ಕೌನ್ಸ್‌ಲಿಂಗ್‌ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವೊಮ್ಮೆ ಮಾನಸಿಕ ಆರೋಗ್ಯ ಹಾಳಾಗಿರುವುದನ್ನ ಪತ್ತೆ ಮಾಡುವುದು ಬಹಳ ಕಷ್ಟವಾಗುತ್ತದೆ. ಕೆಲವರಲ್ಲಿ ಬದಲಾವಣೆ ವರ್ತನೆಯ ಮೂಲಕ ಕಾಣಿಸಿಸುತ್ತದೆ. ಆದರೆ ಕೆಲವರು ಒಳಗೊಳಗೆ ಬಹಳ ನೋವನ್ನ ಅನುಭವಿಸುತ್ತಿರುತ್ತಾರೆ. ತಮ್ಮ ಕಷ್ಟವನ್ನ ಯಾರಿಗೂ ಹೇಳಿಕೊಳ್ಳಲು ಆಗದೇ ಪರದಾಡುತ್ತಿರುತ್ತಾರೆ. ಆದರೆ ಸರ್ಕಾರ ತಂದಿರುವ ಈ ಸಹಾಯವಾಣಿ ನಿಜಕ್ಕೂ ಅನೇಕ ರೀತಿಯಲ್ಲಿ ಸಹಾಯವಾಗಲಿದೆ.

ವಿವರಗಳನ್ನ ಗೌಪ್ಯವಾಗಿ ಇಡಲಾಗುತ್ತೆ

ಮಾನಸಿಕ ಖಿನ್ನತೆ ನಿರ್ವಹಣೆಗೆ ಟೆಲಿಮನಸ್ ಸಹಾಯವಾಣಿಯ ಕೇಂದ್ರವನ್ನ ರಾಜ್ಯದ ಎರಡು ಕಡೆ ಆರಂಭ ಮಾಡಲಾಗಿದೆ. 14416 ನಂಬರ್‌ಗೆ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ನಿಮಗೆ ಕೆಟ್ಟದಾಗಿ ಬೈಯೋ ಅಭ್ಯಾಸ ಇದೆಯಾ – ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು!

ಯಾರಾದರೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ, ಪರೀಕ್ಷಾ ಒತ್ತಡಕೊಳ್ಳಗಾಗಿದ್ದರೆ, ಕೌಟುಂಬಿಕ ಸಮಸ್ಯೆ ಇದ್ದರೆ ಹಾಗೂ ಆಗಾಗ ಆತ್ಮಹತ್ಯೆ ಆಲೋಚನೆ ಬರುತ್ತಿದ್ದರೆ, ಮಾದಕ ವಸ್ತು ವ್ಯಸನಿಗಳಾಗಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಳ್ಳಬಹುದು. ಇನ್ನು ಕರೆ ಮಾಡಿದವರ ವಿವರಗಳನ್ನ ಗೌಪ್ಯವಾಗಿ ಇಡಲಾಗುತ್ತದೆ. ಕರೆಯನ್ನು ಸಹ ರೆಕಾರ್ಡ್‌ ಮಾಡುವುದಿಲ್ಲ. ಹಾಗಾಗಿ ನಿಮ್ಮ ಗುಟ್ಟು ಗುಟ್ಟಾಗಿಯೇ ಇರಲಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!