ರಾಮನಗರದಲ್ಲಿ ಅಯೋಧ್ಯೆಯ ಮಾದರಿಯಲ್ಲಿ ರಾಮಮಂದಿರ ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಇದರ ಅಂಗವಾಗಿ ಪ್ರಾಥಮಿಕ ಹಂತದ ಕಾಮಗಾರಿಗೆ 40 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ರಾಮನಗರ ಜನತೆಗೆ ರಾಮನವಮಿಯ ಉಡುಗೊರೆ ಎಂದಿದ್ದಾರೆ.
ಒಂದೆರೆಡು ವರ್ಷಗಳಲ್ಲಿ ರಾಮದೇವರ ಬೆಟ್ಟ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ನುಡಿದಿರುವ ಡಾ. ಅಶ್ವತ್ಥ್ ನಾರಾಯಣ್, ಇದು ದಕ್ಷಿಣದ ಅಯೋಧ್ಯೆಯಾಗಲಿದೆ ಎಂದಿದ್ದಾರೆ. ಒಂದೆರೆಡು ದಿನಗಳಲ್ಲೇ ದೇವಾಲಯ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ದವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.