ನವದೆಹಲಿ: ಗೂಗಲ್ ಪೇ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಕಾರಣ ಹಲವು ಬಳಕೆದಾರರ ಖಾತೆಗೆ ಗೂಗಲ್ ಪೇನಿಂದ 88,000ದಷ್ಟು ಹಣ ಡೆಪಾಸಿಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ ನಂತರ ಗೂಗಲ್ ಪೇ ಆ ಹಣವನ್ನು ವಾಪಸ್ ಪಡೆದಿದೆ. ಆದರೆ ಯಾವ ಬಳಕೆದಾರರು ಆ ಹಣವನ್ನು ಖರ್ಚು ಮಾಡಿದ್ದಾರೋ ಆ ಹಣವನ್ನು ವಾಪಸ್ ಪಡೆಯುವುದಿಲ್ಲ ಎಂದು ಗೂಗಲ್ ಪೇ ಈಗಾಗಲೇ ಹೇಳಿದೆ
ಹಲವು ಗೂಗಲ್ ಪೇ ಬಳಕೆದಾರರ ರಿವಾರ್ಡ್ ಸೆಕ್ಷನ್‌ನಲ್ಲಿ ಡಾಲರ್‌ಗಟ್ಟಲೆ ಜಮೆ ಆಗಿದ್ದು, ಬಳಕೆದಾರರು ಆಶ್ಚರ್ಯಕ್ಕೊಳಗಾಗಿದ್ದಾರೆ. ಆನಂತರ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಮ್ಮ ಅನುಭವಗಳನ್ನು ಹಂಚಿಕೊಂಡ ಮೇಲೆ ಇದು ತಾಂತ್ರಿಕ ಸಮಸ್ಯೆ ಎನ್ನುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ವರದಿಗಳ ಬರಲಾರಂಭಿಸಿದ ನಂತರ ಎಚ್ಚೆತ್ತ ಗೂಗಲ್ ಪೇ ಖಾತೆಗಳಿಂದ ಹಣ ವಾಪಸ್ ಪಡೆದು ಬಿಟ್ಟ ಹಣ ಬಂತು ಅಂತ ಸಂತಸಗೊಂಡಿದ್ದ ಜನರ ಖುಷಿ ಬ್ರೇಕ್ ಹಾಕಿದೆ