Monday, April 21, 2025
Homeಟಾಪ್ ನ್ಯೂಸ್GOOGLE : ಈ ಬಾರಿಯ ಗಣರಾಜ್ಯೋತ್ಸವ ಡೂಡಲ್ - ವನ್ಯಜೀವಿಗಳಿಗೆ ಅರ್ಪಿಸಿದ ಗೂಗಲ್! 

GOOGLE : ಈ ಬಾರಿಯ ಗಣರಾಜ್ಯೋತ್ಸವ ಡೂಡಲ್ – ವನ್ಯಜೀವಿಗಳಿಗೆ ಅರ್ಪಿಸಿದ ಗೂಗಲ್! 

ಭಾರತದ 76 ನೇ ಗಣರಾಜ್ಯೋತ್ಸವವನ್ನು ಗುರುತಿಸಲು ಗೂಗಲ್ ವಿಶೇಷ ಡೂಡಲ್ ಅನ್ನು ಅನಾವರಣಗೊಳಿಸಿದ್ದು, ದೇಶದ ಶ್ರೀಮಂತ ವೈವಿಧ್ಯತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಆಚರಿಸುತ್ತದೆ.

ದೇಶದಾದ್ಯಂತ  76ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ನಡುವಲ್ಲೇ ವಿಶೇಷ ಡೂಡಲ್‌ ಮೂಲಕ ಗೂಗಲ್ ಶುಭ ಕೋರಿದ್ದು, ದೇಶದ ಶ್ರೀಮಂತ ಜೀವವೈವಿಧ್ಯತೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರದರ್ಶಿಸಿದೆ.

ಗೂಗಲ್ ವಿಶೇಷ ದಿನ ಅಥವಾ ವಿಶೇಷ ಸಂದರ್ಭದಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುತ್ತದೆ, ಅದರಂತೆ ಇಂದು ಕೂಡ ದೇಶದ ವಿವಿಧ ಪ್ರದೇಶದ ಪ್ರಾಣಿ, ಪಕ್ಷಿಗಳನ್ನು ಒಳಗೊಂಡ ಚಿತ್ರವನ್ನು ಹಂಚಿಕೊಂಡಿದ್ದು, ಈ ಮೂಲಕ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿದೆ.

ಪುಣೆ ಮೂಲದ ಕಲಾವಿದ ರೋಹನ್ ದಾಹೋತ್ರೆ ಎಂಬುವವರು ರಚಿಸಿದ ವರ್ಣರಂಜಿತ ವಿನ್ಯಾಸವು ಭಾರತದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಪ್ರಾಣಿಗಳ ಸರಣಿಯನ್ನು ಒಳಗೊಂಡಿದೆ, ಇದು ಉತ್ಸಾಹಭರಿತ ವನ್ಯಜೀವಿ ಮೆರವಣಿಗೆಯನ್ನು ಹೋಲುವಂತೆ ಗೂಗಲ್ ಅಕ್ಷರಗಳಲ್ಲಿ ತೋರಿಸಿದ್ದಾರೆ.

ಚಿತ್ರದಲ್ಲಿ ಗಮನಿಸಿದಂತೆ ಸಾಂಪ್ರದಾಯಿಕ ಲಡಾಖಿ ಉಡುಪುಗಳನ್ನು ಧರಿಸಿರುವ ಹಿಮ ಚಿರತೆ, ಸಂಗೀತ ವಾದ್ಯವನ್ನು ನುಡಿಸುವಾಗ ಧೋತಿ-ಕುರ್ತಾವನ್ನು ಧರಿಸಿರುವ ಹುಲಿ, ನವಿಲು, ಕೃಷ್ಣಮೃಗ ಸೇರಿದಂತೆ ಇನ್ನಿತರ ಪ್ರಾಣಿ ಪಕ್ಷಿಗಳನ್ನು ಒಳಗೊಂಡ ಡೂಡಲ್ ಅನ್ನು ರಚಿಸಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!