Thursday, July 16, 2026
Homeಟಾಪ್ ನ್ಯೂಸ್KRISHNA RIVER: ಮಹಾರಾಷ್ಟ್ರದಲ್ಲಿ ಮಹಾ ಮಳೆ, ಕೃಷ್ಣಾ ನದಿಗೆ ಹರಿದು ಬಂತು 15 ಸಾವಿರ ಕ್ಯೂಸೆಕ್...

KRISHNA RIVER: ಮಹಾರಾಷ್ಟ್ರದಲ್ಲಿ ಮಹಾ ಮಳೆ, ಕೃಷ್ಣಾ ನದಿಗೆ ಹರಿದು ಬಂತು 15 ಸಾವಿರ ಕ್ಯೂಸೆಕ್ ನೀರು

ಚಿಕ್ಕೋಡಿ: ಕಳೆದ ಎರಡು ತಿಂಗಳಿನಿಂದ ನೀರಿಲ್ಲದೆ ಸಂಪೂರ್ಣವಾಗಿ ಒಣಗಿದ್ದ ಕೃಷ್ಣಾ ನದಿಗೆ (Krishna River) ಇದೀಗ ಮತ್ತೆ ಜೀವ ಬಂದಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ನದಿಗೆ ಬರೋಬ್ಬರಿ 15 ಸಾವಿರ ಕ್ಯೂಸೆಕ್ ಒಳಹರಿವು ಆರಂಭವಾಗಿದ್ದು, ನದಿ ಪಾತ್ರದ ರೈತರು ಹಾಗೂ ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

ಕೃಷಿ ಚಟುವಟಿಕೆಗಳಿಗೆ ಜೀವ ತುಂಬಿದ ವರುಣ
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಕೃಷ್ಣಾ ನದಿಯಲ್ಲಿ ಜಲಕ್ಷಾಮ ಎದುರಾಗಿದ್ದರಿಂದ ಇತ್ತೀಚಿನ ದಿನಗಳಲ್ಲಿ ಕೃಷಿ ವಲಯಕ್ಕೆ ತೀವ್ರ ಹಿನ್ನಡೆಯಾಗಿತ್ತು. ಕುಡಿಯುವ ನೀರಿಗೂ ಆಹಾಕಾರ ಸೃಷ್ಟಿಯಾಗುವ ಭೀತಿ ಎದುರಾಗಿತ್ತು. ಆದರೆ, ಇದೀಗ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ನದಿಯ ನೀರಿನ ರಭಸ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಮುಂಗಾರು ಚುರುಕು; ಗಡಿ ಭಾಗದಲ್ಲಿ ಆಶಾಭಾವನೆ
ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಅಲ್ಲಿನ ಜಲಾಶಯಗಳು ಹಾಗೂ ಉಪನದಿಗಳು ಭರ್ತಿಯಾಗುತ್ತಿವೆ. ಇದರ ನೇರ ಪರಿಣಾಮವಾಗಿ ಕರ್ನಾಟಕದ ಗಡಿಯೊಳಗೆ ಹರಿಯುವ ಕೃಷ್ಣಾ ನದಿಯ ಒಳಹರಿವಿನಲ್ಲಿ ಭಾರಿ ಚೇತರಿಕೆ ಕಂಡುಬಂದಿದೆ. ಇದು ಬೆಳಗಾವಿ ಜಿಲ್ಲೆ ಸೇರಿದಂತೆ ನದಿ ಆಶ್ರಿತ ಪ್ರದೇಶಗಳ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಅಗತ್ಯತೆಗಳಿಗೆ ಹೊಸ ಭರವಸೆಯನ್ನು ನೀಡಿದೆ.

ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ಹಾಸನ ಜಿಲ್ಲೆಯ ಗೊರೂರಿನ ಪ್ರಸಿದ್ಧ ಹೇಮಾವತಿ ಜಲಾಶಯಕ್ಕೆ (Hemavathi Reservoir) ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, ಇದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹೆಚ್ಚುತ್ತಿದೆ ಜಲಾಶಯದ ಒಳಹರಿವು
ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗ ಹಾಗೂ ಹೇಮಾವತಿ ನದಿಯ ಉಗಮ ಸ್ಥಾನಗಳಲ್ಲಿ ಬಿಡುವಿಲ್ಲದೆ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ನದಿ-ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ ನಿರಂತರವಾಗಿ ಏರುತ್ತಲೇ ಸಾಗಿದೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕುಡಿಯುವ ನೀರು ಹಾಗೂ ಮುಂಬರುವ ಕೃಷಿ ಚಟುವಟಿಕೆಗಳಿಗೆ ಆಶಾಕಿರಣ ಮೂಡಿಸಿದೆ.

ಮಾಹಿತಿಗಳ ಪ್ರಕಾರ ಶುಕ್ರವಾರ ಬೆಳಗ್ಗೆ ಜಲಾಶಯದ ಒಳಹರಿವಿನ ಪ್ರಮಾಣ 5250 ಕ್ಯಸೆಕ್ಸ್‌ ಇತ್ತು., ಗುರುವಾರ ಬೆಳ್ಳಗ್ಗೆ  ಸಮಯದಲ್ಲಿ 1000 ಕ್ಯೂಸೆಕ್ಸ್‌ ಇದ್ದ ಪ್ರಮಾಣ ಸಂಜೆಯ ವೇಳೆಗೆ ಹೆಚ್ಚಾಗಿತ್ತು ಎನ್ನಲಾಗಿದೆ. ಸದ್ಯ ಜಲಾಶಯದಿಂದ 300 ಕ್ಯೂಸೆಕ್ಸ್‌ ನೀರನ್ನ ಹೊರಗೆ ಬಿಡಲಾಗುತ್ತಿದೆ.

ಈಗ ಜಲಾಶಯದಲ್ಲಿ 2892.38 ಅಡಿ ನೀರಿದೆ, ಇಲ್ಲಿ 2922 ಅಡಿ ನೀರನ್ನ ಸಂಗ್ರಹಣೆ ಮಾಡುವ  ಸಾಮರ್ಥ್ಯ ಇದೆ.  ಇಲ್ಲಿಯವರೆಗೆ ಜಲಾಶಯದಲ್ಲಿ 15.39 ಟಿಎಂಸಿ  ನೀರು ಸಂಗ್ರಹ ಇದೆ. ಇಲ್ಲಿ 37.10 ಟಿಎಂಸಿ ನೀರನ್ನ ಸಂಗ್ರಹ ಮಾಡಬಹುದು.

ಇದನ್ನೂ ಓದಿ: ಮಳೆಗಾಲದ ಅಧಿವೇಶನ ಮುಗಿಯುವವರೆಗೆ ಕೇಂದ್ರ ಸಂಪುಟ ಪುನಾರಚನೆ ಅಸಾಧ್ಯ!?

ಹೆಚ್ಚಿನ ಸುದ್ದಿ

Change Language »
error: Content is protected !!