ಚಿಕ್ಕಮಗಳೂರು: ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ, ಮತದಾರರಿಗೆ ಆಮಿಷವೊಡ್ಡುವ ಚುನಾವಣಾ ಅಕ್ರಮಗಳ ಪತ್ತೆ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಚಿಕ್ಕಮಗಳೂರಿನಲ್ಲಿ 6.44 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಅಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14.4 ಲಕ್ಷ ರೂ. ಮೌಲ್ಯದ 18 ಕೆಜಿ ಬೆಳ್ಳಿ ಕಾಲಿನ ಗೆಜ್ಜೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಡಿಗೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿಯ ಚೆಕ್‍ಪೋಸ್ಟ್‍ನಲ್ಲಿ ಈ ಅಕ್ರಮ ಸಿಕ್ಕಿಬಿದ್ದಿದೆ. ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಈ ಬಹುಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2.5 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾವಗಡ ಮೂಲಕ ವೈದ್ಯರೊಬ್ಬರು ಕಟೀಲಿನ ದುರ್ಗಾಪರಮೇಶ್ವರಿ ದೇಗುಲದ ಹುಂಡಿಗೆ ಅರ್ಪಿಸಲು ತಂದಿದ್ದ ಹಣ ಎನ್ನಲಾಗಿದೆ.
ಇದೇ ರೀತಿಯಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು ಯಾದಗಿರಿ- 3.30 ಲಕ್ಷ ರೂ., ಗದಗದ ದುಂದೂರಿನಲ್ಲಿ -2 ಲಕ್ಷ ರೂ., ವಿಜಯನಗರದಲ್ಲಿ 40 ಲಕ್ಷ ರೂ. ಮೌಲ್ಯದ ಗಿಫ್ಟ್ ಐಟಮ್ಸ್, ಕಲಬುರಗಿಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ 4.5 ಕೋಟಿ ರೂ., ಬಾಗಲಕೋಟೆಯ ಕಲಾದಗಿಯಲ್ಲಿ 1.05 ಲಕ್ಷ ರೂ, ವಶಕ್ಕೆ ಪಡೆಯಲಾಗಿದೆ