ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 11 ಮತ್ತು 12 ರಂದು ಸರ್ಕಾರ ಮಹಿಳಾ ಕ್ರೀಡಾ ಹಬ್ಬ ಆಯೋಜಿಸುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಕ್ರೀಡಾ ಉತ್ಸಾಹವನ್ನು ಹುರಿದುಂಬಿಸಲು ಹಾಗೂ ಕ್ರೀಡಾ ಮನೊಭಾವನೆಯನ್ನು ಮೂಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ‘ಮಹಿಳಾ ಕ್ರೀಡಾ ಹಬ್ಬ’ವನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉದ್ಘಾಟಿಸಲಿದ್ದಾರೆ ಎಂದು ಸಚಿವ ನಾರಾಯಣಗೌಡ ಹೇಳಿದ್ರು.
ಈ ಕ್ರೀಡಾ ಹಬ್ಬದಲ್ಲಿ ಹಾಕಿ, ಕಬ್ಬಡಿ, ಆರ್ಚರಿ ಮತ್ತು ಸ್ಕೇಟಿಂಗ್, ಸಾಹಸ ಕ್ರೀಡೆಗಳಲ್ಲಿ ವಾಲ್ ಕ್ಲೈಂಬಿಗ್, ರಾಪಲಿಂಗ್, ಕಯಾಕಿಂಗ್ ಮತ್ತು ರಾಫ್ಟಿಂಗ್, ಸಾಂಪ್ರದಾಯಿಕ ಕ್ರೀಡೆ ವಿಭಾಗದಲ್ಲಿ ಕುಂಟೆ ಬಿಲ್ಲೆ, ಅಳಿಗುಳಿಮನೆ ಆಟ, ಲಗೋರಿ, ಹಗ್ಗ ಜಗ್ಗಾಟ, ಕಲೆ ಮತ್ತು ಕರಕುಶಲ ಕಲೆ ವಿಭಾಗದಲ್ಲಿ ರಂಗೋಲಿ, ಕ್ಯಾಲಿಗ್ರಫಿ, ಮೆಹಂದಿ ಮತ್ತು ಮಡಿಕೆ ತಯಾರಿಕೆ ಮನರಂಜನೆ ಮತ್ತು ಮೋಜಿನ ಆಟಗಳಲ್ಲಿ ಮ್ಯೂಸಿಕಲ್ ಪಜಲ್‌ಗಳು, ಡಂಷರಾಟ್ಸ್, ಮೆಮೊರಿ ಗೇಮ್,ಮ್ಯೂಸಿಕಲ್ ಚೇರ್, ಕೆರೆ ದಡ, ಬಕೆಟ್ ಬಾಲ್ ಸೇರಿದಂತೆ ಹತ್ಮತಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಇದಷ್ಟೇ ಅಲ್ಲದೇ ಶಾಪಿಂಗ್ ಹಾಗೂ ಆಹಾರ ಮೇಳವೂ ಈ ಕ್ರೀಡಾ ಹಬ್ಬದ ಅಟ್ರ್ಯಾಕ್ಷನ್ ಆಗಿರಲಿದೆ