ಮನೆಯಲ್ಲಿ ಪತ್ನಿ ಕಾಟವೆಂದು ಮುಂಬೈಯಿಂದ ಗೋವಾ ಹೊರಟಿದ್ದ ವ್ಯಕ್ತಿಯೊಬ್ಬರು ಕರ್ನಾಟಕ ತಲುಪಿ ಪೇಚಿಗೆ ಸಿಲುಕಿದ ವಿಚಿತ್ರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗೂಗಲ್ ಮ್ಯಾಪ್ ಅನ್ನು ನಂಬಿ ದಾರಿ ತಪ್ಪಿದ ಉದ್ಯಮಿಯನ್ನು ಲಕ್ಷಾಂತರ ರೂಪಾಯಿ ಹಣದೊಂದಿಗೆ ಬೆಳಗಾವಿ ಪೊಲೀಸರು ಮಾರ್ಗಮಧ್ಯೆ ತಡೆದಿದ್ದಾರೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ತೆಗೆದುಕೊಂಡು ಹೋಗಲು ಸೂಕ್ತ ದಾಖಲಾತಿ ನೀಡಬೇಕು. ಇಲ್ಲದಿದ್ದರೆ, ಅಧಿಕಾರಿಗಳು ಹಣ ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ, ಉದ್ಯಮಿ ಬಳಿ ಇದರಂತೆ, ಮುಂಬೈ ಉದ್ಯಮಿಯೊಬ್ಬರು 26 ಲಕ್ಷ ರೂಪಾಯಿ ಹಣ ಲಕ್ಷ ನಗದು ಇರುವುದುಬೆಳಕಿಗೆ ಬಂದಿದೆ. ರಾಜರೋಷವಾಗಿ, ಇಷ್ಟೊಂದು ದೊಡ್ಡ ಮೊತ್ತದದೊಂದಿಗೆ ಸಂಚರಿಸುತ್ತಿರುವುದು ಕಂಡು ಪೊಲೀಸರ ಅಚ್ಚರಿಗೆ ಕಾರಣವಾಗಿದೆ.
ವಿಚಾರಣೆ ವೇಳೆ, ತಾನು ಹೆಂಡತಿಯ ಕಾಟದಿಂದ ತಪ್ಪಿಸಿಕೊಂಡು ಗೋವಾ ಪ್ರವಾಸ ಮಾಡುತ್ತಿರುವುದಾಗಿಯೂ, ಮುಂಬೈಯಿಂದ ಬರುವಾಗ ಆನ್‌ಲೈನ್ ಮ್ಯಾಪ್ ತಪ್ಪಾದ ದಾರಿ ತೋರಿಸಿ ಕರ್ನಾಟಕಕ್ಕೆ ಬಂದಿರುವುದಾಗಿಯೂ ಉದ್ಯಮಿ ಹೇಳಿದ್ದಾರೆ. ಉದ್ಯಮಿಯ ಕತೆ ಕೇಳಿ ಬೇಸ್ತು ಬಿದ್ದ ಪೊಲೀಸರು ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದು, ಉದ್ಯಮಿಯ ವಿಚಾರಣೆ ನಡೆಸುತ್ತಿದ್ದಾರೆ.