Wednesday, August 19, 2026
Homeಟಾಪ್ ನ್ಯೂಸ್BIG NEWS: ಭಾರತಕ್ಕೆ ಜರ್ಮನ್‌ ವಿದೇಶಾಂಗ ಸಚಿವ ಭೇಟಿ- ದ್ವಿಪಕ್ಷೀಯ ವ್ಯಾಪಾರದ ಕುರಿತು...

BIG NEWS: ಭಾರತಕ್ಕೆ ಜರ್ಮನ್‌ ವಿದೇಶಾಂಗ ಸಚಿವ ಭೇಟಿ- ದ್ವಿಪಕ್ಷೀಯ ವ್ಯಾಪಾರದ ಕುರಿತು ಮಹತ್ವದ ಘೋಷಣೆ

ನವದೆಹಲಿ: ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ವಿರುದ್ಧ ಭಾರೀ ಸುಂಕ ವಿಧಿಸಿದ ಘಟನೆಯ ಮಧ್ಯೆ ಜರ್ಮನ್ (German) ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ (Johann David Wadephul) ಭಾರತಕ್ಕೆ ಭೇಟಿ ನೀಡಿದ್ದಾರೆ.

ಭಾರತಕ್ಕೆ ಭೇಟಿ ನೀಡಿರುವ ವಾಡೆಫುಲ್ ಅವರು ದೆಹಲಿಯಲ್ಲಿ ಭಾರತೀಯ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ, ಎರಡೂ ದೇಶಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ವ್ಯವಹಾರ ಸಂಬಂಧಗಳ ಕುರಿತು ಪ್ರಮುಖ ಘೋಷಣೆಗಳನ್ನು ಮಾಡಿವೆ.

ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೈಶಂಕರ್, ಎರಡೂ ದೇಶಗಳ ನಡುವೆ ಕೈಗಾರಿಕಾ ಸಹಕಾರದ ಕುರಿತು ಮಾತುಕತೆ ನಡೆದಿದೆ. ಜರ್ಮನ್ ಉದ್ಯಮದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ಎರಡೂ ದೇಶಗಳಲ್ಲಿ ರಫ್ತು ನಿರ್ಬಂಧಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.

‌ಇದನ್ನೂ ಓದಿ: ಅಮೆರಿಕನ್ ಕಂಪನಿಗಳು ಭಾರತದಿಂದ ವಾಪಸ್ಸಾಗಲಿವೆ – ಡೊನಾಲ್ಡ್ ಟ್ರಂಪ್

ಇದೇ ವೇಳೆ ಜರ್ಮನ್ ಕಂಪನಿಗಳ ಯಾವುದೇ ಕಾಳಜಿಗಳಿಗೆ ಭಾರತ ವಿಶೇಷ ಗಮನ ಹರಿಸಲು ಸಿದ್ಧವಾಗಿದೆ ಎಂದು ಜೈಶಂಕರ್‌ ಘೋಷಿಸಿದರು. ಸೆಮಿಕಂಡಕ್ಟರ್‌ಗಳು ಪ್ರಮುಖ ವಲಯವಾಗಿ ಹೊರಹೊಮ್ಮಿವೆ. ಭಾರತದ ಪ್ರತಿಭಾನ್ವಿತ ಯುವಕರು ಇದಕ್ಕೆ ಕೊಡುಗೆ ನೀಡಬಹುದು. ಎರಡೂ ದೇಶಗಳ ನಡುವಿನ ಸೈಬರ್ ಮತ್ತು ಡಿಜಿಟಲ್ ಸಂವಾದವೂ ಮುಖ್ಯ ಎಂದು ವಿದೇಶಾಂಗ ಸಚಿವರು ಹೇಳಿದರು.

ಜರ್ಮನ್ ವಿದೇಶಾಂಗ ಸಚಿವರು ಮಾತನಾಡಿ, ಭಾರತ ಮತ್ತು ಜರ್ಮನಿ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಿಕಟ ಸಂಬಂಧವನ್ನು ಹೊಂದಿವೆ. ಭದ್ರತಾ ಸಹಕಾರದಿಂದ ತಂತ್ರಜ್ಞಾನ ಮತ್ತು ನಾವೀನ್ಯತೆವರೆಗೆ, ಹಾಗೆಯೇ ಕೌಶಲ್ಯಪೂರ್ಣ ಕೆಲಸಗಾರರ ನೇಮಕಾತಿಯವರೆಗೆ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸಲು ಸಾಕಷ್ಟು ಸಾಮರ್ಥ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ : ಭಾರತದ ಜೊತೆಗಿನ ಸಂಬಂಧವೇ ದೊಡ್ಡ ವಿಪತ್ತು -‌ ಟ್ರಂಪ್‌ ಕಿರಿಕ್ ಇನ್ನಷ್ಟು ಹೆಚ್ಚಾಗುತ್ತಾ?

ಇಸ್ರೋಗೆ ಭೇಟಿ: ಜರ್ಮನ್ ವಿದೇಶಾಂಗ ಸಚಿವರು ತಮ್ಮ ಪ್ರವಾಸವನ್ನು ಬೆಂಗಳೂರಿನಿಂದ ಪ್ರಾರಂಭಿಸಿದ್ದಾರೆ. ಮೊದಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಗೆ ಭೇಟಿ ಭೇಟಿ ನೀಡಿದರು. ಇದು ಭಾರತದೊಂದಿಗೆ ಬಾಹ್ಯಾಕಾಶ ಸಹಕಾರದಲ್ಲಿ ಜರ್ಮನಿಯ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸಿದೆ.

ಈ ಬಗ್ಗೆ ಮಾತನಾಡಿದ ಜೈಶಂಕರ್‌, ಬಾಹ್ಯಾಕಾಶ ಸಹಕಾರವು ಎರಡು ದೇಶಗಳ ನಡುವಿನ ಪ್ರಮುಖ ಕೇಂದ್ರಬಿಂದುವಾಗಿದೆ. ನಮ್ಮ ಚರ್ಚೆಗಳಲ್ಲಿ ಹಸಿರು ಹೈಡ್ರೋಜನ್, ಹಸಿರು ಇಂಧನ ಹಣಕಾಸು ಮುಂತಾದ ವಿಷಯಗಳು ಸಹ ಸೇರಿವೆ. ಜರ್ಮನಿಯಲ್ಲಿ ಭಾರತವು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಹೀಗಿರುವಾಗ ಅಲ್ಪಾವಧಿಯ ಕಾಲೇಜು ಭೇಟಿಗಳಿಗೆ ಉಚಿತ ವೀಸಾಗಳಿಗೆ ನಾವು ಒಪ್ಪಿಗೆ ನೀಡಿದ್ದೇವೆ ಎಂದರು.

ಹೆಚ್ಚಿನ ಸುದ್ದಿ

Change Language »
error: Content is protected !!