Wednesday, February 19, 2025
Homeಟಾಪ್ ನ್ಯೂಸ್ಎನ್‌ಡಿಟಿವಿ ಬಳಿಕ ಮತ್ತೊಂದು ಮಾಧ್ಯಮ ಸಂಸ್ಥೆ ಅದಾನಿ ತೆಕ್ಕೆಗೆ

ಎನ್‌ಡಿಟಿವಿ ಬಳಿಕ ಮತ್ತೊಂದು ಮಾಧ್ಯಮ ಸಂಸ್ಥೆ ಅದಾನಿ ತೆಕ್ಕೆಗೆ

ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಬ್ಯುಸಿನೆಸ್‌ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಗೌತಮ್‌ ಅದಾನಿ ಮಾಧ್ಯಮ ಕ್ಷೇತ್ರವನ್ನೂ ಬಿಟ್ಟಿಲ್ಲ. ಎನ್‌ಡಿಟಿವಿ ಬಳಿಕ ಅದಾನಿ ಸಮೂಹವು ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನೂ ಖರೀದಿಸಿದೆ.

ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾದ ಸುಮಾರು 49 ಶೇಕಡಾ ಪಾಲನ್ನು ಅದಾನಿ ಒಡೆತನದ ಎಎಮ್‌ಜಿ ಮೀಡಿಯಾ ನೆಟ್‌ವರ್ಕ್ಸ್ ಖರೀದಿಸಿದೆ. ಅದಾನಿ ಎಂಟರ್‌ಪ್ರೈಸಸ್‌ನ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್ ಪ್ರಕಾರ, ರಾಘವ್ ಬಹ್ಲ್ ನೇತೃತ್ವದ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾದಲ್ಲಿ ಸುಮಾರು 47.84 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ ಶೇ. 49 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಅದಾನಿ ಸಮೂಹವು ಎನ್‌ಡಿಟಿವಿ ಷೇರುಗಳನ್ನು ಖರೀದಿಸಿತ್ತು. ಅದಾನಿ ಸಮೂಹಕ್ಕೆ ಎನ್‌ಡಿಟಿವಿ ಷೇರುಗಳು ಮಾರಾಟವಾಗುತ್ತಿದ್ದಂತೆ ಎನ್‌ಡಿಟಿವಿಯ ಹಲವು ಪತ್ರಕರ್ತರು ರಾಜಿನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದರು.

ಹೆಚ್ಚಿನ ಸುದ್ದಿ

error: Content is protected !!