Tuesday, May 19, 2026
Homeಟಾಪ್ ನ್ಯೂಸ್ARUN GAWLI: ಕುಖ್ಯಾತ ಗ್ಯಾಂಗ್‌ಸ್ಟರ್‌ ಅರುಣ್‌ ಗೌಳಿ ಜೈಲಿನಿಂದ ಹೊರಗೆ - ಏನಿವನ ಇತಿಹಾಸ ಗೊತ್ತೇ?

ARUN GAWLI: ಕುಖ್ಯಾತ ಗ್ಯಾಂಗ್‌ಸ್ಟರ್‌ ಅರುಣ್‌ ಗೌಳಿ ಜೈಲಿನಿಂದ ಹೊರಗೆ – ಏನಿವನ ಇತಿಹಾಸ ಗೊತ್ತೇ?

ಮುಂಬೈ: 17 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಇದ್ದ ಪಾತಕಿ ರಾಜಕಾರಣಿಯಾಗಿ ಅರುಣ್ ಗೌಳಿ (Arun Gawli) ಜಾಮೀನಿನ (Bail) ಮೇಲೆ ಬಿಡುಗಡೆ ಆಗಿದ್ದಾರೆ.

 2007ರಲ್ಲಿ ಜೈಲಿಗೆ ಹೋಗಿದ್ದ ಅರುಣ್‌ ಗೌಳಿ
2007 ರ ಕೊಲೆ ಪ್ರಕರಣವೊಂದರಲ್ಲಿ ಅರುಣ್‌ ಗೌಳಿ ಜೈಲಿಗೆ ಹೋಗಿದ್ದರು. ಸುಮಾರು 17ಕ್ಕೂ ಹೆಚ್ಚು ವರ್ಷಗಳ ಕಾಲ ಗೌಳಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು, ಇದೀಗ ಹೊರಗೆ ಬಂದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಬೈ ಶಿವಸೇನಾ ಕಾರ್ಪೊರೇಟರ್ ಕಮಲಾಕರ್ ಜಮ್ಸಂದೇಕರ್ ​​ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 76 ವರ್ಷದ ಗೌಳಿಗೆ ಇದೀಗ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ಈ ತೀರ್ಪು ನೀಡಿದ್ದಾರೆ.

ಕಾರಾಗೃಹ ಇಲಾಖೆಯ ಎಲ್ಲಾ ಕಾನೂನು ವಿಧಿವಿಧಾನಗಳು ಪೂರ್ಣಗೊಳಿಸಿದ ನಂತರ, ಗೌಳಿ ಮಧ್ಯಾಹ್ನ 12.30 ರ ಸುಮಾರಿಗೆ ಜೈಲಿನಿಂದ ಹೊರಬಂದ್ದಿದಾರೆ. ಜೈಲಿನಿಂದ ಹೊರ ಬಂದ ಗೌಳಿಯನ್ನ ಕುಟುಂಬ ಸದಸ್ಯರು, ವಕೀಲರು ಮತ್ತು ಬೆಂಬಲಿಗರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ : ಭಾರತದ ಪ್ರಸಿದ್ದ ವನ್ಯಜೀವಿ ಛಾಯಾಗ್ರಾಹಕಿ ಕೊಲ್ಲೂರಿನಲ್ಲಿ ನಿಗೂಢ ಸಾವು

 ಬೈಕುಲ್ಲಾ ಗ್ಯಾಂಗ್‌ ಲೀಡರ್‌ ಆಗಿದ್ದ ಗೌಳಿ
ದಾವುದ್‌ ಇಬ್ರಾಹಿಂ ಸಕ್ರಿಯವಾಗಿದ್ದ ಸಮಯದಲ್ಲಿ ಖ್ಯಾತಿ ಆಗಿದ್ದ ಬೈಕುಲ್ಲಾ ಗ್ಯಾಂಗ್‌  ಲೀಡರ್‌ ಈ ಅರುಣ್‌ ಗೌಳಿ ದಗ್ಡಿ ಚಾಲ್‌ನಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ. ಅಲ್ಲದೇ, ಅಖಿಲ ಭಾರತೀಯ ಸೇನೆಯ ಸ್ಥಾಪಕರಾಗಿದ್ದ ಗೌಳಿ, 2004 ರಿಂದ 2009 ರವರೆಗೆ ಮುಂಬೈನ ಚಿಂಚ್‌ಪೋಕ್ಲಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಇನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಗೌಳಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು, ಆಗಸ್ಟ್ 2012 ರಲ್ಲಿ, ಮುಂಬೈನ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 17 ಲಕ್ಷ ರೂ. ದಂಡ ವಿಧಿಸಿತು. ಡಿಸೆಂಬರ್ 9, 2019 ರಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ, ಗೌಳಿ ಅರ್ಜಿ ಸಹ ಸಲ್ಲಿಸಿದ್ದರು. ಇದೀಗ ವಿಚಾರಣಾ ನ್ಯಾಯಾಲಯ ವಿಧಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಉನ್ನತ ನ್ಯಾಯಾಲಯವು ಗೌಳಿಗೆ ಜಾಮೀನು ನೀಡಲಾಗಿದೆ.

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು

ಇನ್ನು ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ವಿಜಯಪುರದ ಭೀಮತೀರದಲ್ಲಿ ಮತ್ತೆ ಗುಂಡಿನ ಸೌಂಡ್  ಕೇಳಿಸಿದೆ. ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದ್ದು, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ರೌಡಿಶೀಟರ್ ಭಿಮನಗೌಡ ಬಿರಾದರ್ (45) ಮೇಲೆ ಫೈರಿಂಗ್ ನಡೆಸಲಾಗಿದೆ. ಗಾಯಗೊಂಡ ಭೀಮನಗೌಡನನ್ನು ವಿಜಯಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಪ್ರಾಣಬಿಟ್ಟಿದ್ದಾನೆ. ಭೀಮನ ಗೌಡಗೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಭೀಮನಗೌಡ ಬಿರಾದರ್ ತಲೆ, ಎದೆಗೆ ಗುಂಡು ತಗುಲಿದ್ದು, ಮಹದೇವ ಭೈರಗೊಂಡ ಪರಮ ಆಪ್ತನಾದ ಭೀಮನಗೌಡ ಬಿರಾದರ್ ಕಟಿಂಗ್ ಮಾಡಿಸಿಕೊಳ್ಳುವಾಗ ಕಣ್ಣಿಗೆ ಕಾರದಪುಡಿ ಎರಚಿ, ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!